8,000 ಹೆಕ್ಟರ್ನಲ್ಲಿ ಮುಸುಕಿನ ಜೋಳ
ತರೀಕೆರೆ: ತರೀಕೆರೆ ತಾಲೂಕಿನಲ್ಲಿ ಮುಸುಕಿನ ಜೋಳ ಈ ಬಾರಿ ಬಂಪರ್ ಬೆಳೆ ನಿರೀಕ್ಷಿಸಬಹುದಾಗಿದೆ.
ಈಗಾಗಲೇ ತಾಲೂಕಿನ ಕಸಬಾ, ಅಜ್ಜಂಪುರ, ಶಿವನಿ, ಅಮೃತಾಪುರ, ಲಕ್ಕವಳ್ಳಿ ಮತ್ತಿತರರ ಕಡೆ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಅನೇಕ ಕಡೆ ಮುಸುಕಿನ ಜೋಳ ಬಿತ್ತನೆ ಕಾರ್ಯ ಇನ್ನೂ ಒಂದು ತಿಂಗಳ ಕಾಲ ಮುಂದುವರಿಯಲಿದೆ.
14 ಸಾವಿರ ಹೆಕ್ಟೇರ್ ಗುರಿ: ರೈತರು ಮುಸಿಕಿನ ಜೋಳ ಬಿತ್ತನೆ ಬೀಜ ಮತ್ತು ಲಘು ಪೋಷಕಾಂಶಗಳನ್ನು ರೈತ ಸಂಪರ್ಕ ಕೇಂದ್ರದಿಂದ ಖರೀದಿಸುತ್ತಿದ್ದು ತಾಲೂಕಿನಲ್ಲಿ ಈ ಸಾರಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯುವ ಗುರಿ ಹೊಂದಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.20 ರಷ್ಟು ಹೆಚ್ಚು ಮುಸುಕಿನ ಜೋಳದ ಬೆಳೆ ನಿರೀಕ್ಷಿಸಬಹುದಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.