ಅಜ್ಜಂಪುರ-ಬೀರೂರು ರಸ್ತೆ ಪ್ಯಾಚಿಂಗ್ ಕಾಮಗಾರಿ ಪ್ರಾರಂಭ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಜೂ.25
ಆಳುದ್ದ ಗುಂಡಿ ಗೊಟರುಗಳಿಂದ ತುಂಬಿದ್ದ ಅಜ್ಜಂಪುರ-ಬೀರೂರು ರಾಜ್ಯ ಹೆದ್ದಾರಿ ರಸ್ತೆಗೆ ತಾತ್ಕಾಲಿಕ ಶಮನವಾಗಿ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಾರಂಭವಾಗಿದೆ.
ವಾಹನಗಳ ದಟ್ಟ ಸಂಚಾರದಿಂದ ಕೂಡಿದ ಅಜ್ಜಂಪುರ-ಬೀರೂರು ರಾಜ್ಯ ಹೆದ್ದಾರಿ ರಸ್ತೆ ಕಳೆದ 9 ವರ್ಷಗಳಿಂದ ದುರಸ್ತಿ ಕಾಣದೆ ಹಾಳಾದ ರಸ್ತೆಯಲ್ಲೇ ಪ್ರಯಾಣಿಕರ ವಾಹನಗಳು ಸಂಚರಿಸಬೇಕಿತ್ತು.
ದೂರು: ಬೀರೂರು-ಅಜ್ಜಂಪುರ ಮಾರ್ಗವಾಗಿ ಬುಕ್ಕಾಂಬುದಿ ತನಕ ರಸ್ತೆ ತೀವ್ರತರದಲ್ಲಿ ಹಾಳಾಗಿದ್ದು ಈ ಮಾರ್ಗವಾಗಿ ಬಸ್ಸುಗಳು ಸಂಚರಿಸಲು ಸಾಧ್ಯವಾಗದೆ ತುಂಬಾ ತೊಂದರೆಯಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬಸ್ ಅಪರೇಟರ್ಸ್ ಅಸೋಸಿಯೇಶನ್ ಒತ್ತಾಯಿಸಿತ್ತು. ರಸ್ತೆ ಹಾಳಾಗಿರುವುದರ ಬಗ್ಗೆ ಕಳೆದ ವಾರ ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿ ಇದೀಗ ಅಜ್ಜಂಪುರ-ಬೀರೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕಾರ್ಯ ಪ್ರಾರಂಭಿಸಲಾಗಿದೆ.