ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ರೋಗ ನಿಯಂತ್ರಣಕ್ಕೆ ಕ್ರಮ

Rashmi Kasaragodu
Updated On : 26 Jun 2013, 10:59 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಜೂ.25
ಜೂನ್ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ವಾತಾವರಣದಲ್ಲಿ ಶೇ. 90ಕ್ಕಿಂತ ಹೆಚ್ಚು ತೇವಾಂಶ ಇದ್ದು, ಉಷ್ಣಾಂಶ 15 ರಿಂದ 20ಡಿಗ್ರಿಗಿಂತ ಕಡಿಮೆ ಇರುತ್ತದೆ. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿರುಸಾದ ಶೀತಭರಿತ ಗಾಳಿ ಮತ್ತು ಶಕ್ತಿಯುತ ಮಳೆಹನಿಗಳು ಕೊಳೆ ರೋಗದ ರೋಗಾಣುಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಳೆ ಅಡಕೆ ಕಾಯಿಗಳ ತೊಟ್ಟಿನ ಭಾಗಗಳಲ್ಲಿ ನೀರಿನಿಂದ ತೊಯ್ದ ಬೂದು ಬಣ್ಣದ ಮಚ್ಚೆಗಳು ರೋಗದ ಲಕ್ಷಣಗಳಾಗಿದ್ದು, ಮಚ್ಚೆಗಳು ನಂತರ ಇಡೀ ಕಾಯಿಗಳಿಗೆ ಹರಡಿ ಕಾಯಿ, ಹಸಿರು ಬಣ್ಣ ಕಳೆದುಕೊಂಡು, ಕಡುನೀಲಿ ಬಣ್ಣಕ್ಕೆ ತಿರುಗಿ ಕ್ರಮೇಣ ಹೊಂಬಾಳೆಯಿಂದ ಉದುರುತ್ತವೆ. ರೋಗ ಹೆಚ್ಚಾದಾಗ ಶಿಲೀಂಧ್ರ  ರೋಗಾಣುಗಳು ಸುಳಿಗೆ ಹರಡಿ ಇಡಿ ತೊಂಡೆ ತುಂಡಾಗಿ ಬೀಳಬಹುದು.
ನಿಯಂತ್ರಣ ಕ್ರಮ: ತೋಟಗಳಲ್ಲಿ ನೀರು ನಿಲ್ಲದಂತೆ ಮಾಡುವುದು, ರೋಗಪೀಡಿತ ಉದುರಿದ ಕಾಯಿಗಳನ್ನು ಆರಿಸಿ ನಾಶ ಪಡಿಸುವುದು, ತೋಟದಲ್ಲಿರುವ ಇತರೆ ಬೆಳೆಗಳ (ಕೊಕೋ, ಮೆಣಸು, ಲವಂಗ, ಏಲಕ್ಕಿ ಮತ್ತು ದಾಲ್ಚಿನಿ) ಮತ್ತು ತೋಟದ ಸುತ್ತಲೂ ಇರುವ ನೆರಳು ಮರಗಳ ಹೆಚ್ಚುವರಿ ರೆಂಬೆ ಕತ್ತರಿಸಿ ಗಾಳಿಯಾಡುವಂತೆ ಮಾಡಬೇಕು ಎಂದು ತೋಟಗಾರಿಕಾ ನಿರ್ದೇಶಕರು ತಿಳಿಸಿದ್ದಾರೆ.
ಜತೆಗೆ ತಟಸ್ಥಗೊಳಿಸಿ ಶೇ.1ರ ಬೋಡೊ ದ್ರಾವಣವನ್ನು (ಶೇ.25ರಷ್ಟು ತಾಮ್ರದ ಅಂಶವಿರುವ ಮೈಲುತುತ್ತ)ಗೊನೆಗಳಿಗೆ ಸಿಂಪಡಿಸುವುದು, ಬುಡಭಾಗದಲ್ಲಿ ಉದುರಿರುವ ರೋಗ ಪೀಡಿತ ಕಾಯಿಗಳಿದ್ದಲ್ಲಿ, ಬುಡಭಾಗವನ್ನು ಇದೇ ಶಿಲೀಂಧ್ರ ನಾಶಕದಿಂದ ನೆನೆಸುವುದು, ಬಿಸಿಲಿನ ವಾತಾವರಣದಲ್ಲಿ ಬೋಡೋ ದ್ರಾವಣ ಸಿಂಪಡಿಸುವುದು, ಬೋಡೋ ದ್ರಾವಣಕ್ಕೆ ಬದಲಾಗಿ ಪ್ರತಿ 1 ಲೀಟರ್ ನೀರಿಗೆ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ. ಮ್ಯಾಂಕೋಜೆಬ್ 72 ಡಬ್ಲೂಪಿ ಮಿಶ್ರಣವನ್ನು ಸೂಕ್ತ ಅಂಟಿನೊಂದಿಗೆ ಬೆರೆಸಿ ಗೊನೆಗಳಿಗೆ ಸಿಂಪಡಿಸುವುದು, ಬೋಡೋ ದ್ರಾವಣ ಸಿಂಪಡಿಸುವಾಗ ಸುಳಿಭಾಗಕ್ಕೆ ಔಷಧಿ ಬೀಳುವಂತೆ ಸಿಂಪಡಿಸಿದರೆ ಸುಳಿಕೊಳೆ  ರೋಗ ಬಾಧೆ ಕಡಿಮೆಯಾಗುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement