ಅಕ್ರಮ ಮರಳು ಸಾಗಣೆ; ಟ್ರ್ಯಾಕ್ಟರ್ ಚಾಲಕ ಬಂಧನ
ಮೂಡಿಗೆರೆ: ತಾಲೂಕಿನ ಹಂಡುಗುಳಿಯಲ್ಲಿದ್ದ ಅಕ್ರಮ ಮರಳನ್ನು ಪಟ್ಟಣದ ಪ್ರವಾಸಿ ಮಂದಿರಕ್ಕೆ ಸಾಗಿಸದೆ ಬೇರೆಡೆ ಸಾಗಿಸುಸುತ್ತಿರುವಾಗ ಟ್ರ್ಯಾಕ್ಟರ್ ಚಾಲಕನೋರ್ವ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆಯಲ್ಲಿ ಅಕ್ರಮ ಮರಳು ವಶಕ್ಕೆ ತೆಗೆದುಕೊಳ್ಳುತ್ತಿದ್ದು, ವಶಪಡಿಸಿಕೊಂಡ ಮರಳನ್ನು ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಶೇಖರಿಡಿಸಲಾಗಿದೆ. ಈ ಮರಳು ಸಾಗಿಸಲು ಅಧಿಕಾರಿಗಳು 17 ಟ್ರ್ಯಾಕ್ಟರ್ ಗೊತ್ತು ಪಡಿಸಿದ್ದರು. ಬುಧವಾರ ನಡೆದ ಕಾರ್ಯಚರಣೆ ವೇಳೆ ಮಣಿಕಂಠ ಎಂಬ ಚಾಲಕ ಟ್ರ್ಯಾಕ್ಟರ್‌ನಲ್ಲಿ ಮರಳನ್ನು ಬೇರಡೆ ಸಾಗಿಸುತ್ತಿದ್ದಾಗ ಅಧಿಕಾರಿಗಳು ದಾಳಿ ಮಾಡಿ ಮರಳು ಸಹಿತ ವಾಹನ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.