ಅಪಘಾತ: 2 ಸಾವು, ಇಬ್ಬರಿಗೆ ಗಾಯ
ತರೀಕೆರೆ: ಸಮೀಪದ ಲಿಂಗದಹಳ್ಳಿ ಬಳಿ ಬುಧವಾರ ತಡ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರಿಗೆ ತೀವ್ರ ಗಾಯಗಳಾಗಿದೆ. ಮೃತರನ್ನು ವಿನಾಯಕ್ (22) ಮತ್ತು ಶಿವಪ್ರಸಾದ್ ಎಂದು ಪೊಲೀಸರು ಗುರುತಿಸಿದ್ದು, ಇಬ್ಬರೂ ಬೆಂಗಳೂರಿನ ಬಿಇಎಂಎಸ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಕೆಮ್ಮಣಗುಂಡಿಯಿಂದ ವಾಪಸ್ಸು ಬರುತ್ತಿದ್ದಾಗ ಲಿಂಗದಹಳ್ಳಿ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಈ ಆಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ್ ಬೀರೂರಿನ ಚಂದ್ರಶೇಖರ್ ಅವರ ಮಗನಾಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿ ಶಿವಪ್ರಸಾದ್ ತಂದೆ ಹೆಸರು ತಿಳಿದುಬಂದಿಲ್ಲ. ಕಾರಿನಲ್ಲಿದ್ದ ಗಣೇಶ್ ಮತ್ತು ಸೂರಜ್ ಎನ್ನುವ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸಗೆ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ.