ಅಂತಾರಾಷ್ಟ್ರೀಯ ಹಿಮಾಲಯ ಚಾರಣಕ್ಕೆ ಆಹ್ವಾನ
ಶಿವಮೊಗ್ಗ: ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ವತಿಯಿಂದ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 9ರ ವರೆಗೆ ಕಠ್ಮಂಡು ಪ್ರದೇಶದಲ್ಲಿರುವ ಗೋಸಾಯಿ ಕುಂಡ್ ಹಿಮಾಲಯ ಪ್ರದೇಶದಲ್ಲಿ ಚಾರಣ ಹಮ್ಮಿಕೊಂಡಿದೆ.
ಕನಿಷ್ಠ ಒಂದು ಹಿಮಾಲಯ ಚಾರಣ ಮಾಡಿದ 16 ವರ್ಷ ಮೇಲ್ಪಟ್ಟ 45 ವರ್ಷ ಒಳಗಿನ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರು ಈ ಅಂತಾರಾಷ್ಟ್ರೀಯ ಚಾರಣದಲ್ಲಿ ಭಾಗವಹಿಸಬಹುದು. 10 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಹೆಸರನ್ನು ನೋಂದಾಯಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ತಾವು ಮಾಡಿರುವ ಹಿಮಾಲಯದ ಚಾರಣದ ಪ್ರಮಾಣ ಪತ್ರದೊಂದಿಗೆ ತಮ್ಮ ಹೆಸರನ್ನು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕ ಅಧ್ಯಕ್ಷ ಅ.ನಾ. ವಿಜಯೇಂದ್ರ ರಾವ್ ಅವರನ್ನು ಸಂಪರ್ಕಿಸಿ.