ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೀಣಿಸಿದ ಮುಂಗಾರು

Rashmi Kasaragodu
Updated On : 28 Jun 2013, 11:32 am

ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಚುರುಕಾಗಿದ್ದ ಮುಂಗಾರು ಮಳೆ ಗುರುವಾರ ಕ್ಷೀಣಿಸಿತ್ತು.
 ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿತ್ತಾದರೂ, ದಟ್ಟವಾಗಿ ಮೋಡ ಕವಿದ ವಾತಾವರಣ ಎಂದಿನಂತೆ ಮುಂದುವರೆದಿತ್ತು. ಮಳೆಯ ಬಿಡುವು ಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣ ಇದೆ. ಹೊಲಗಳಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ.
 ಚಿಕ್ಕಮಗಳೂರು ಸೇರಿದಂತೆ ಮಲೆನಾಡು ತಾಲೂಕುಗಳಲ್ಲಿ ಮಳೆ ಆಗಾಗ ಬಿಡುವು ನೀಡುತ್ತಿತ್ತು. ಇನ್ನುಳಿದಂತೆ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಕಳೆದ ನಾಲ್ಕು ದಿನಗಳಿಗೆ ಹೋಲಿಕೆ ಮಾಡಿದರೆ ಮಳೆಯ ಪ್ರಮಾಣ ಬಹಳಷ್ಟು ಇಳಿಮುಖವಾಗಿದೆ. ಆಗಾಗ ತುಂತುರು ಹನಿಯಾಗಿ ಬರುತ್ತಿದ್ದ ಮಳೆ ಸಾರ್ವಜನಿಕರಿಗೆ ಎಂದಿನಂತೆ ಕಿರಿಕಿರಿ ಎನಿಸಿತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ಈ ಕೆಳಕಂಡಂತೆ ಇದೆ.
 ಚಿಕ್ಕಮಗಳೂರು- 5.4 ಮಿ.ಮೀ., ವಸ್ತಾರೆ- 15.4, ಜೋಳ್ದಾಳ್- 19.4, ಆಲ್ದೂರು- 30.2, ಅತ್ತಿಗುಂಡಿ- 80.4, ಕಡೂರು- 1.1, ಸಖರಾಯಪಟ್ಟಣ- 2.4, ಬೀರೂರು- 3.9, ಕೊಪ್ಪ- 47, ಹರಿಹರಪುರ- 45.2, ಜಯಪುರ- 61.8, ಕಮ್ಮರಡಿ- 45.3, ಬಸರೀಕಟ್ಟೆ- 44.5, ಮೂಡಿಗೆರೆ- 28.1, ಕೊಟ್ಟಿಗೆಹಾರ- 50.8, ಜಾವಳಿ- 40.3, ಗೋಣಿಬೀಡು- 30, ಕಳಸ- 30.4, ಎನ್.ಆರ್. ಪುರ- 23.4, ಬಾಳೆಹೊನ್ನೂರು- 31.2, ಮೇಗರಮಕ್ಕಿ- 38, ಶೃಂಗೇರಿ- 50, ಕಿಗ್ಗಾ- 87, ಬಸರೀಕಟ್ಟೆ- 116.4, ತರೀಕೆರೆ- 7.4, ಲಕ್ಕವಳ್ಳಿ- 7, ಅಜ್ಜಂಪುರ- 6.8, ಶಿವನಿ- 3.2, ಲಿಂಗದಹಳ್ಳಿ- 12.6 ಮಿ.ಮೀ. ಮಳೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement