ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೋಕಾಯುಕ್ತ ಹೆಸರಲ್ಲಿ ಹಣ ವಸೂಲಿ: ಆರೋಪಿ ವಿಚಾರಣೆ

Rashmi Kasaragodu
Updated On : 28 Jun 2013, 11:32 am

ಕೊಪ್ಪ: ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿಕೊಂಡು ಕೊಪ್ಪ ತಾಲೂಕು ಕಾರ್ಯನಿರ್ವಹಣಾಧಿಕಾರಿ ತಿಪ್ಪೇಶರವರಿಗೆ ಬ್ಲಾಕ್ ಮೇಮಾಡಿ ಹಣ ಕೇಳುತ್ತಿದ್ದ ಆರೋಪದಲ್ಲಿ  ಚಿಕ್ಕೂಡಿಯ ಸದಲಗ ಜೈಲಿನಲ್ಲಿದ್ದ ಮೂರ್ಗಪ್ಪ ನಿಂಗ್ಯಪ್ಪ ಕುಂಬಾರ ಎಂಬವರನ್ನು ನ್ಯಾಯಾಲಯದ ಅಪ್ಪಣೆಯ ಮೇರೆಗೆ ಕೊಪ್ಪ ಪೊಲೀಸರು ಗುರುವಾರ ಕರೆ ತಂದು ವಿಚಾರಣೆ ನಡೆಸಿದ್ದಾರೆ.
 ವಿಚಾರಣೆ ಸಂದರ್ಭದಲ್ಲಿ ಬ್ಲಾಕ್ ಮೇಲ್ ಮಾಡಿದ್ದು ಸತ್ಯವೆಂದು ಒಪ್ಪಿಕೊಂಡಿದ್ದರಿಂದ  ಕೊಪ್ಪ ಸಿವಿಲ್ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಸೂಕ್ತ ಬಂದೋಬಸ್ತ್ನಲ್ಲಿ ಆರೋಪಿಯನ್ನು ಮತ್ತೆ   ಚಿಕ್ಕೂಡಿಯ ಸದಲಗ ಜೈಲಿಗೆ ಬಿಡಲು ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದರು.
ಘಟನೆ ವಿವರ: ಆರೋಪಿ ಕೊಪ್ಪ ತಾಲೂಕು ಕಾರ್ಯನಿರ್ವಹಣಾಧಿಕಾರಿ ತಿಪ್ಪೇಶ್ಗೆ ದೂರವಾಣಿ ಕರೆ ಮಾಡಿ ನಾನು ಲೋಕಾಯುಕ್ತ ಡಿವೈಎಸ್ಪಿ ನಿಮ್ಮ ಮೇಲೆ ಬ್ರಷ್ಟಚಾರದ ಆರೋಪವಿದೆ ನಮ್ಮ ತಂಡ ನಿಮ್ಮ ಕಚೇರಿ ಮತ್ತು ಮನೆ ಮೇಲೆ ದಾಳಿಮಾಡುತ್ತೇವೆ ಎಂದು ಹೇಳಿದ್ದಾನೆ. ನಂತರ ದಾಳಿ ಮಾಡುವುದು ಬೇಡವೆಂದಲ್ಲಿ ರು.50 ಸಾವಿರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಬೆದರಿಸಿದ್ದಾನೆ.
 ಇಓ ಹಣ ಬ್ಯಾಂಕ್ ಖಾತೆಗೆ ಹಾಕದೇ ಕೊಪ್ಪ ಪೊಲೀಸರಿಗೆ ದೂರು ನಿಡಿದ್ದರು. ಈ ದೂರಿನ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ. ಜಗದೀಶ್ ನೇತೃತ್ವದಲ್ಲಿ ಸಿಪಿಐ ಸಂಗಮೇಶ್ ಪಾಟೀಲ್, ಪಿಎಸ್ಐ ಗವಿರಾಜ್ ಮತ್ತು ಸಿಬ್ಬಂದಿ ಆರೋಪಿಯ ಜಾಡು ಹುಡುಕಿದಾಗ ಈತ ಇತ್ತೀಚೆಗೆ ಇದೇ ರೀತಿಯ ಕೆಲಸ ಮಾಡಿ ಬೆಳಗಾಂ ಮಾರ್ಕೆಟ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಚಿಕ್ಕೂಡಿಯ ಸದಲಗ ಜೈಲಿನಲ್ಲಿದ್ದಾನೆ ಎಂಬುದನ್ನು ತಿಳಿದುಕೊಂಡು. ನ್ಯಾಯಾಲಯದ ಅಪ್ಪಣೆ ಮೇರೆಗೆ ಕರೆತಂದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿವರ: ಆರೋಪಿ ಬೆಳಗಾಂ ಜಿಲ್ಲೆಯಲ್ಲಿ 1986-04 ವರೆಗೆ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇದೇ ರೀತಿ ಬ್ರಷ್ಟಾಚಾರದ ಕೆಲಸ ಮಾಡಿದ ಆರೋಪದಿಂದ ಕೆಲಸದಿಂದ ವಜಾ ಮಾಡಲಾಗಿತ್ತು ಎನ್ನಲಾಗಿದೆ. ಈತ ಇದೇ ರೀತಿ 20 ಕಡೆ ಬೆದರಿಸಿ ಲಕ್ಷಾಂತರ ಹಣ ವಸೂಲಿ ಮಾಡಿದ್ದು, ಈವರೆಗೆ ಈತನ ಮೇಲೆ 12 ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್ಪಿ ಡಾ. ಜಗದೀಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement