ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Rashmi Kasaragodu
Updated On : 29 Jun 2013, 10:44 am

ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.28
ಸರ್ಕಾರದ ಕೆಲಸ ದೇವರ ಕೆಲಸವೆಂದು ಬರೀ ಗೋಡೆಗಳಲ್ಲಿ ಬರವಣಿಗೆಯಾಗಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರದ ಕಟ್ಟಡ ಕಳಪೆ ಗುಣಮಟ್ಟದಲ್ಲಿ ನಿರ್ಮಿಸಿ ಜನ ಸಾಮಾನ್ಯರ ಜೀವಕ್ಕೆ ಕುತ್ತು ತರುವುದರೊಂದಿಗೆ, ಸರ್ಕಾರದ ಹಣ ಲೂಟಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು ಶಾಸಕರನ್ನು ಒತ್ತಾಯಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಆಗಮಿಸಿದ ಶಾಸಕ ನಿಂಗಯ್ಯ ಅವರನ್ನು ಭೇಟಿ ಮಾಡಿ, ಕಾಲೇಜು ಕಟ್ಟಡ ನಿರ್ಮಿಸಿ 5 ವರ್ಷಗಳಲ್ಲೇ ಸೋರುತ್ತಿರುವ ಕಟ್ಟಡ ಉದಾಹರಣೆ ನೀಡಿದ ಅವರು, ಮಲೆನಾಡಿಗೆ ಆರ್ಸಿಸಿ ಕಟ್ಟಡ ಸರಿ ಹೊಂದುವುದಿಲ್ಲ ಹಂಚು, ಸೀಟಿನ ಕಟ್ಟಡಗಳು ಸೂಕ್ತ. ಆದರೆ ಎಂಜಿಯರ್  ಹಾಗೂ ಗುತ್ತಿಗೆದಾರರು ದುಡ್ಡು ಮಾಡುವ ನೆಪದಲ್ಲಿ ಆರ್ಸಿಸಿ ಕಟ್ಟಡ ಕಟ್ಟುವಂತೆ ನಕಾಶೇ ತಯಾರಿಸಿ ನಂತರ ಅದಕ್ಕೆ ಶೀಟಿನ ಹೊದಿಕೆ ಹಾಕಿ ಸರ್ಕಾರದ ಹಣ ಪೊಲು ಮಾಡುತ್ತಿದ್ದಾರೆ ಎಂದರು.
ಛತ್ರಿಯಾಶ್ರಯ: ಪಾಠ ಕೇಳುವ ವಿದ್ಯಾರ್ಥಿಗಳು ಛತ್ರಿ ಹಿಡಿದೇ ಪಾಠ ಕೇಳುತ್ತಿದ್ದು, ಪ್ರಾಂಶುಪಾಲರೂ ತಮ್ಮ ಕೊಠಡಿ  ಬಿಟ್ಟು ತರಗತಿಯಲ್ಲೇ ಕುಳಿತುಕೊಳ್ಳುತ್ತಿದ್ದಾರೆ. ಮೂಡಿಗೆರೆ ಮಿನಿವಿಧಾನ ಸೌಧಕ್ಕೆ ಬರುವ ಸಾರ್ವಜನಿಕರೂ ತಮ್ಮ ಕೊಡೆ ಬಿಡಿಸೊಕಂಡು ಕರ್ಚಿಯಲ್ಲಿ ಆಸಿನರಾಗುತ್ತಿದ್ದಾರೆ.
ಇತ್ತೀಚೆಗೆ ಪಪಂ ವತಿಯಿಂದ 2 ಶೌಚಾಲಯ ನಿರ್ಮಿಸಿದ್ದು, ತಾಲೂಕು ಕಚೇರಿ ಪಕ್ಕದಲ್ಲಿರುವ ಶೌಚಾಲಯ ನಿರ್ವಹಣೆ ಇಲ್ಲದೆ, ಗಬ್ಬೆದ್ದು ನಾರುತ್ತಿದೆ. ಶೌಚಾಲಯದ ಮಲ ಮೂತ್ರಗಳು ಹೊರಕ್ಕೆ ಹೋಗದ ಹಾಗೆ ಕಟ್ಟಿಕೊಂಡಿದ್ದು, ದುರ್ನಾಥ ಬೀರುತ್ತಿದೆ.
ರೋಗದ ಭೀತಿ: ರೋಗದರೊಂದಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳೇ ಹೆಚ್ಚಾಗಿದೆ. ತಾಲೂಕ್ ಕಚೇರಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಿ ಬರಬೇಕಾಗಿದೆ ಎಂದು ಆರೋಪಿಸಿದರು
ಆಗ ಶಾಸಕ ಬಿ.ಬಿ.ನಿಂಗಯ್ಯ ಕಟ್ಟಡ ಪರಿಶೀಲನೆ ನಡೆಸುವುದರೊಂದಿಗೆ ಮತ್ತು ಕಳಪೆ ಕಾಮಗಾರಿ ನಡೆಸಿರುವ ಕಾಮಗಾರಿ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement