ಸಮರ್ಪಕ ಚರಂಡಿ ನಿರ್ಮಿಸುವಲ್ಲಿ ನಿರ್ಲಕ್ಷ್ಯ
ಕೊಪ್ಪ: ಇಲ್ಲಿನ ದ್ಯಾವೇಗೌಡ ವೃತ್ತದಿಂದ ಹಳೇ ತಾಲೂಕು ಕಚೇರಿಯವರೆಗೆ ನಿರ್ಮಿಸಿರುವ ರಸ್ತೆಯ ಇಕ್ಕೆಲಗಳಲ್ಲಿ ಸರ್ಮಪಕ ಚರಂಡಿ ನಿರ್ಮಾಣ ಮಾಡದೇ ರಸ್ತೆಯ ಮೇಲೆ ಮಳೆ ನೀರು ಹರಿದು ವಾಹನ ಸಂಚಾರಿಗಳಿಗೆ ಇದು ಮೃತ್ಯುಕೂಪದಂತೆ ಪಾರಿಣಮಿಸಿದೆ. ಈ ರಸ್ತೆ ಶಿವಮೊಗ್ಗ, ಕೊಪ್ಪ, ಶೃಂಗೇರಿ,ಚಿಕ್ಕಮಗಳೂರು, ತೀರ್ಥಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿರುವುದರಿಂದ ನಿತ್ಯ ಸಾವಿರಾರು ವಾಹಗನಳು ಸಂಚಾರಿಸುತ್ತವೆ. ಅಲ್ಲದೇ ಈ ಮಾರ್ಗದಲ್ಲೇ ಇರುವ ಬಾಳಗಡಿಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳು, ಪ್ರಥಮ ದರ್ಜೆ ಕಾಲೇಜುಗಳು ಇರುವುದರಿಂದ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಹಿಂದೆ ರಸ್ತೆ ತುಂಬಾ ಕಿರಿದಾಗಿದೆ ಎಂಬ ಉದ್ದೇಶಕ್ಕಾಗಿ ರಸ್ತೆಯ ಆಗಲೀಕರಣ ಮಾಡಲಾಗಿದ್ದು, ರಸ್ತೆ ಕಾಮಗಾರಿ ಇತೀಚೇಗಷ್ಟೇ ಪೂರ್ಣಗೊಂಡಿತ್ತು. ಅದರೆ ರಸ್ತೆಯ ಬದಿ ಸರ್ಮಪಕ ಚರಂಡಿ ನಿರ್ಮಾಣಮಾಡುವತ್ತ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸದ ಪರಿಣಾಮ ಈ ವರ್ಷ ಪ್ರಾರಂಭದಲ್ಲೇ ಭಾರೀ ಮಳೆ ಸುರಿದು ಮಳೆ ನೀರು ರಸ್ತೆಯ ಮೇಲೆ ಹರಿದು ಕಂದಕಗಳು ನಿರ್ಮಾಣವಾಗಿದೆ. ವಾಹನಗಳಿಗೆ ಅನಾಹುತ ಸಂಬಂವಿಸುವುದು ಖಚಿತವಾಗಿದೆ. ಸಂಬಂದ ಪಟ್ಟ ಇಲಾಖೆ ಇತ್ತ ಗಮನ ಹರಿಸಿ ಸರ್ಮಪಕ ಚರಂಡಿ ನಿರ್ಮಾಣ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.