ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆರೋಗ್ಯಕರ ಜೀವನಕ್ಕೆ ಜಾಗೃತಿ ಅಗತ್ಯ

Rashmi Kasaragodu
Updated On : 30 Jun 2013, 12:31 pm

ತರೀಕೆರೆ: ಆರೋಗ್ಯಕರ ಜೀವನ ನೆಡೆಸಲು ಜಾಗೃತಿ ಮೂಡಬೇಕು ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಿದಾಯತ್ ಉಲ್ಲಾ ಷರೀಫ್ ತಿಳಿಸಿದ್ದಾರೆ.
ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಮೀಪದ ಯಲುಗೆರೆ ಗ್ರಾಮದ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಡೆಂಘೀ ಜಾಗೃತಿ ಅಭಿಯಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಡೆಂಘೀ ಮಹಾಮಾರಿಯಾಗಿ ಹರಡುತ್ತಿದೆ,   ಜ್ವರ ಬಂದರೆ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷ್ಮಿ ಮಾತನಾಡಿ, ನೀರು ನಿಲ್ಲದಂತೆ ನೋಡಿಕೊಳ್ಳಿ, ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಿ, ಮಕ್ಕಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.
300 ಶಂಕಿತ ಡೆಂಘೀ: ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ಪ್ರಸನ್ನಕುಮಾರ್ ಸಣ್ಣಕ್ಕಿ ಮಾತನಾಡಿ,  ಜನಸಂಪರ್ಕ ಮಾಡಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ನೀರು ಸಂಗ್ರಹಿಸುವ ತೊಟ್ಟಿಯನ್ನು ಶುಭ್ರವಾಗಿ ತೊಳೆಯಬೇಕು. ತಾಲೂಕಿನಲ್ಲಿ 300 ಶಂಕಿತ ಡೆಂಘೀ ಕಂಡು ಬಂದಿತ್ತು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್ ಮಾತನಾಡಿ, ಅರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಮುಂಜಾಗ್ರತೆ ವಹಿಸಿ ರೋಗ ತಡೆಗಟ್ಟಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಜಗದೀಶ್ ನಾಯಕ್, ಸಂಪನ್ಮೂಲ ವ್ಯಕ್ತಿ ರುದ್ರೇಗೌಡ, ವಕೀಲ ಸುರೇಶ್ ಚಂದ್ರ, ರೇವಣಸಿದ್ದಪ್ಪ ಮಾತನಾಡಿದರು. ಗ್ರಾಪಂ ಸದಸ್ಯರು, ಶಾಲೆ ಮುಖ್ಯೋಪಾಧ್ಯಾಯರು, ವಕೀಲ ತೇಜಮೂರ್ತಿ, ಡಾ. ಪ್ರವೀಣ್, ಡಾ. ದೀಪಕ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement