ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೀರೂರುವರೆಗೆ ಇಂಟರ್ಸಿಟಿ ವಿಸ್ತರಣೆಗೆ ಕ್ರಮ

Rashmi Kasaragodu
Updated On : 30 Jun 2013, 12:32 pm

ಕ.ಪ್ರ.ವಾರ್ತೆ ಟಿ ಕಡೂರು ಟಿ  ಜೂ.29
ಬೆಂಗಳೂರು- ಅರಸೀಕೆರೆ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲನ್ನು ಬೀರೂರಿನವರೆಗೆ ವಿಸ್ತರಣೆ, ಎಲ್ಲ ಎಕ್ಸ್ಪ್ರೆಸ್ ರೈಲುಗಳು ಕಡೂರು ನಿಲ್ದಾಣದಲ್ಲಿ ನಿಲುಗಡೆ ಸೇರಿದಂತೆ ಕಡೂರು- ಬೀರೂರು ರೈಲ್ವೆ ನಿಲ್ದಾಣಗಳ ಅವ್ಯವಸ್ಥೆ ಹಾಗೂ ಸವಲತ್ತುಗಳ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣ ಕಾಮಗಾರಿ ಹಾಗೂ ಇರುವ ಸಮಸ್ಯೆಗಳ ತಿಳಿಯಲು ಶಾಸಕ ವೈಎಸ್ವಿ ದತ್ತ ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಅರಸೀಕೆರೆ ನಿಲ್ದಾಣ ಸೇರಿದಂತೆ ಈ ಎರಡು ನಿಲ್ದಾಣಗಳಲ್ಲಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವ ಖರ್ಗೆಯವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಸೀಕರೆ ಮತು ಚಿಕ್ಕಮಗಳೂರಿನಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಿದರು.
ನಿಲುಗಡೆ ಭರವಸೆ: ಕಡೂರು ರೈಲ್ವೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಿಂದ ಅರಸೀಕೆರೆವರೆಗೆ ಓಡುವ ಇಂಟರ್ಸಿಟಿ ರೈಲನ್ನು ಬೀರೂರು ನಿಲ್ದಾಣದವರೆಗೆ ವಿಸ್ತರಿಸುವುದಾಗಿಯೂ ಅಧಿಕಾರಿಗಳು ಸಮಯ ಹೊಂದಾಣಿಕೆ ಮಾಡಿಕೊಂಡು ನಿಲುಗಡೆ ಮಾಡಿಸುವ ಭರವಸೆ ನೀಡಿದ್ದಾರೆ ಎಂದರು.
ಕಡೂರು ರೈಲ್ವೆ ನಿಲ್ದಾಣದಲ್ಲಿ ಆಗಿರುವ ಕಳಪೆ ಕಾಮಗಾರಿ ಸರಿಪಡಿಸಲು ಸೂಚನೆ ನೀಡಲಾಗಿದೆ. ನಿಲ್ದಾಣದಲ್ಲಿ ರಿಕ್ಷಾ ನಿಲ್ದಾಣ, ಟಿಕೆಟ್ ಕೌಂಟರ್  ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಗೂಡ್ಸ್ ರೈಲು ಸ್ಥಳಾಂತರಕ್ಕೆ ಶೆಡ್ ನಿರ್ಮಾಣದ ಕುರಿತು ವಿವಾದವಿದ್ದು, ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದ ಅವರು, ವಿಷಾದವೆಂದರೆ ರೈಲ್ವೆ ಎಲ್ಲ ಅಭಿವೃದ್ಧಿ ಸಿಂಹಪಾಲನ್ನು ತಮಿಳುನಾಡು ಪಡೆದಿದೆ. ಅಲ್ಲಿಯವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿರುವುದರಿಂದ ಅಭಿವೃದ್ಧಿ ಹೆಚ್ಚು ಪಾಲು ತಮಿಳುನಾಡಿಗೆ ಹೋಗಿದೆ ಎಂದು ತಿಳಿಸಿದರು.
ಸ್ಥಳ ಪರಿಶೀಲನೆ: ಖರ್ಗೆಯವರೇ ರೈಲ್ವೆ ಮಂತ್ರಿಗಳಾಗಿರುವುದರಿಂದ ರಾಜ್ಯಕ್ಕೆ ಸಾಧ್ಯವಾದಷ್ಟು ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ 45 ಗಂಟೆಯೊಳಗೆ ಸ್ಥಳ ಪರೀಶೀಲನೆಗೆ ಖರ್ಗೆಯವರು ಅದೇಶ ಮಾಡಿದ ಬೆನ್ನಲ್ಲೇ ಇಂದು ತಮ್ಮ ಜೊತೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದರು.
ಮತ್ತೊಂದು ಸಭೆ: ಜನರಿಗೆ ಸಂಸದನಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕಾದದ್ದು ನನ್ನ ಕರ್ತವ್ಯವಾಗಿದೆ. ಹೋರಾಟವೇ ನನ್ನ ಮುಖ್ಯ ಗುರಿಯಾಗಿದೆ. ಕಡೂರು ನಿಲ್ದಾಣ ಒಂದರಲ್ಲೇ ದಿನಕ್ಕೆ  2571ರಷ್ಟು ಟಿಕೆಟ್ ವಿತರಣೆ ಮತ್ತು ಸರಕು ಸಾಗಾಣಿಕೆಯಿಂದ ಹೆಚ್ಚು ಆದಾಯ ತಂದು ಕೊಡುವ ರೈಲ್ವೆ ನಿಲ್ದಾಣ ಇದಾಗಿದ್ದರೂ ನಿಲ್ದಾಣಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಬಗ್ಗೆ ಮತ್ತೊಂದು ಸಭೆ ಸೇರಿ ತೀರ್ಮಾನ ಕೈಗೊಳ್ಳುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ವೈಎಸ್ವಿ ದತ್ತ, ರೈಲ್ವೆ ಅಧಿಕಾರಿಗಳಾದ ರಂಗನಾಥ್, ಲೋಕೇಶ್, ಸತ್ತಾರ್, ಮುಖಂಡರಾದ ಕೆ. ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಕೆ.ಎಸ್. ತಿಪ್ಪೇಶ್, ಎನ್. ಇಮಾಮ್, ಬಿ.ಟಿ. ಗಂಗಾಧರನಾಯ್ಕ ,ಕೆ.ಎಸ್. ರಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಸೀಗೇಹಡ್ಲು ಹರೀಶ್, ಬಿ.ಪಿ. ನಾಗರಾಜು , ತಮ್ಮಯ್ಯಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement