ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

8ರಂದು ತಾಲೂಕು ಸಾಹಿತ್ಯ ಸಮ್ಮೇಳನ

Rashmi Kasaragodu
Updated On : 2 Mar 2013, 10:55 am

ಕಡೂರು: ಮಾರ್ಚ್ 8 ಹಾಗೂ 9 ರಂದು ತಾಲೂಕು ದೇವನೂರಿನ ಲಕ್ಷ್ಮೀಶ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನ ನಡೆಯಲಿದೆ.
 ಎರಡು ದಿನಗಳ ಕಾಲ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಾಕವಿ ಲಕ್ಷೀಶ ವೇದಿಕೆ, ಮುಕುಂದೂರು ಸ್ವಾಮಿ ಮಹಾದ್ವಾರ, ಅಜ್ಜಂಪುರ ಜಿ. ಸೂರಿ ಮಂಟಪ ನಿರ್ಮಾಣ ಮಾಡಲಾಗುವುದು. ಮಾರ್ಚ್ 8 ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಶಾಸಕ ಡಾ.ವೈ.ಸಿ. ವಿಶ್ವನಾಥ್ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಚಟ್ಟನಹಳ್ಳಿ ಮಹೇಶ್, ಸಾಹಿತ್ಯ ಚಿಂತಕರು ಭಾಗವಹಿಸಲಿದ್ದಾರೆ. ಮೆರವಣಿಗೆಯನ್ನು ಮಾಜಿ ಜಿಪ ಅಧ್ಯಕ್ಷೆ ಪ್ರುಪುಲ್ಲಾ ಮಂಜುನಾಥ್ ಉಧ್ಘಾಟಿಸಲಿದ್ದಾರೆ.
 ಮಹಾಕವಿ ಲಕ್ಷೀಶ ವೇದಿಕೆಯಲ್ಲಿ ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉಧ್ಘಾಟನಾ ಸಮಾರಂಭ ಕೆರೆಗೋಡು ರಂಗಾಪುರದ ಗುರು ಪರದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಕಡೂರು ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಶುಭನುಡಿ ನುಡಿಯಲಿದ್ದಾರೆ. ಶಾಸಕ ಡಾ.ವೈ.ಸಿ. ವಿಶ್ವನಾಥ್ ಸ್ವಾಗತಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕ ನುಡಿ ನುಡಿಯಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಸಮಾರಂಭ ಉಧ್ಘಾಟಿಸಲಿದ್ದಾರೆ. ಸಚಿವ ಜೀವರಾಜ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಉನ್ತತ ಶಿಕ್ಷಣ ಸಚಿವ ಸಿ.ಟಿ. ರವಿ ಪುಸ್ತಕ ಮಳಿಗೆ ಉಧ್ಘಾಟಿಸಲಿದ್ದಾರೆ.
 ಮಧ್ಯಾಹ್ನ 2 ಮತ್ತು ಸಂಜೆ 5 ಗಂಟೆಗೆ ಗೋಷ್ಠಿಗಳು ನಡೆಯಲಿವೆ. ಮಾರ್ಚ್ 9 ರ ಶನಿವಾರ 4ನೇ ಗೋಷ್ಠಿ, 5ನೇ ಗೋಷ್ಠಿ ಬೆಳಿಗ್ಗೆ 10 ರಿಂದ ನಡೆಯಲಿದ್ದು, 6ನೇ ಗೋಷ್ಠಿ 12ಗಂಟೆಗೆ  ಆರಂಭವಾಗಲಿದೆ. 7ನೇ ಗೋಷ್ಠಿ ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ. ಸಂಜೆ 5 ಗಂಟೆಗೆ ಸಿರಿಗೆರೆ ಮಠದ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ.
ಸಮೇಳನಾಧ್ಯಕ್ಷ ಚಟ್ಟನಹಳ್ಳಿ ಮಹೇಶ್ ಸಮ್ಮೇಳನಾಧ್ಯಕ್ಷರ ನುಡಿ ನುಡಿಯಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಲ್ದಿದ್ದಾರೆ. ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ,  ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಗಡೆ ಭಾಗವಹಿಸಲಿದ್ದಾರೆ. ಸಚಿವ ಸಿ.ಟಿ. ರವಿ ಕೃತಿ ಬಿಡುಗಡೆ ಮಾಡಲಿದ್ದು, ಮಾಜಿ ರಾಜ್ಯ ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಗೌರವ ಸಮರ್ಪಣೆ ಮಾಡಲಿದ್ದು ಮಾಜಿ ಸಚಿವ ಪಿಜಿಆರ್. ಸಿಂಧ್ಯಾ, ಕೆ.ಬಿ. ಮಲ್ಲಿಕಾರ್ಜುನ್,  ಎಸ್.ಎಲ್. ಧಮೇಗೌಡ, ವೈ.ಎಸ್.ವಿ. ದತ್ತ, ಕೆ.ಎಂ. ಕೆಂಪರಾಜು, ಬೆಳ್ಳಿ ಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement