ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಬೇಡ

Rashmi Kasaragodu
Updated On : 2 Mar 2013, 10:54 am

ಕಪ್ರ ವಾರ್ತೆ ನರಸಿಂಹರಾಜಪುರ ಮಾ.1 ಭಾರತೀಯ ಸಂಸ್ಕೃತಿಯನ್ನು ವಿದೇಶಿಯರೇ ಅನುಕರಣೆ ಮಾಡುತ್ತಿರುವ ದಿನಗಳಲ್ಲಿ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ವಿಷಾದಕರ ಎಂದು ಹರಿಹರಪುರ ಅ.ರಾ.ಸ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮ್ ಪ್ರಸಾದ್ ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ಕಮಲಾಪುರ ಶಾಲಾ ಆವರಣದಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯುತ್ತಿದ್ದ ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ, ವಿದೇಶಿಯರು ಹಣದಲ್ಲಿ ಶ್ರೀಮಂತರಿರಬಹುದು.
ಆದರೆ, ಭಾರತ ಸಂಸ್ಕೃತಿ, ಸಂಸ್ಕಾರ, ನಡುವಳಿಕೆಗಳಿಂದಲೇ ಶ್ರೀಮಂತ ರಾಷ್ಟವಾಗಿದ್ದು, ವಿದೇಶಗಳಿಗೆ ಆದರ್ಶ ಪ್ರಾಯವಾಗಿದೆ. ಯುವ ಜನತೆಯಲ್ಲಿ ಪ್ರಾಮಾಣಿಕತೆ, ಶ್ರದ್ದೆ ಇದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.
ಕಲಿಕೆಯಲ್ಲಿ ಯಶಸ್ವಿ: ಮ್ಯಾಮ್ಕೋಸ್ ಸದಸ್ಯ ವೈ.ಎಸ್. ಸುಬ್ರಮಣ್ಯ ಮಾತನಾಡಿ, 7 ದಿನಗಳ ಕಾಲ ನಡೆದ ಎನ್ಎಸ್ಎಸ್ ಶಿಬಿರದಲ್ಲಿ ಗ್ರಾಮಸ್ಥರೊಂದಿಗೆ ಬ್ರಾತೃತ್ವ ಬೆಳೆಯಲು ಸಹಾಯವಾಯಿತು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಸಿ. ವೆಂಕಟೇಶ್ ಮಾತನಾಡಿ, 7 ದಿನಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಕಲಿಕೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಯಡಗೆರೆ ಮಂಜುನಾಥ್, ಸೀತೂರು ಗ್ರಾಪಂ ಸದಸ್ಯೆ ರಜನಿರಮೇಶ್, ವೈ.ಎಸ್. ಗಣೇಶ್, ಎ.ಎಸ್. ವೆಂಕಟರಮಣ, ಕೃಷಿಕ ಸತೀಶ್ ನಾಯಕ್, ಶಾಲಾ ಮುಖ್ಯೋಪಾಧ್ಯಾಯನಿ ಪ್ರಮೀಳಾ, ಶಿಕ್ಷಣ ಇಲಾಖೆಯ ಸುಕೇಶ್, ವೈ.ಕೆ.ಶ್ರೀನಿವಾಸ್, ಎನ್ಎಸ್ಎಸ್ ಶಿಬಿರಾಧಿಕಾರಿ ಡಾ. ಪ್ರಸನ್ನಕುಮಾರ್, ಎಸ್.ಎ. ನರಸಿಂಹ, ಸಹ ಶಿಬಿರಾಧಿಕಾರಿ ಎ.ಸಿ. ಪುಟ್ಟಸ್ವಾಮಿ, ಎಂ.ಕೆ. ಮಮತ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement