ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಮಾಜಿಕ ಸೇವೆಗೂ ಬ್ಯಾಂಕ್ ಬದ್ಧ: ಶಿವನಾಗಪ್ಪ

Rashmi Kasaragodu
Updated On : 2 Mar 2013, 10:54 am

ತರೀಕೆರೆ: ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಬ್ಯಾಂಕ್ ತೊಡಗಿಸಿಕೊಂಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತರೀಕೆರೆ ಶಾಖೆ ಪ್ರಧಾನ ವ್ಯವಸ್ಥಾಪಕ ಶಿವನಾಗಪ್ಪ
ತಿಳಿಸಿದ್ದಾರೆ.
 ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುನ ನೀರಿನ ಉಪಕರಣ ವಿತರಣಾ ಸಮಾರಂಭದಲ್ಲಿ
ಮಾತನಾಡಿ, ಎಸ್ಬಿಐ ಬ್ಯಾಂಕಿಗೆ ಬರುವ ಒಟ್ಟು ಲಾಭದಲ್ಲಿ ಶೇ.1ರಷ್ಟು ಸಮಾಜಕ್ಕೆ ಉಪಯೋಗವಾಗುವ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದು, ಸದರಿ ಹಣದಲ್ಲಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಉಪಕರಣ ಸರ್ಕಾರಿ ಶಾಲೆಗಳಿಗೆ ನೀಡುತ್ತಿದ್ದು ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ, ಎಸ್ಬಿಐ ಸಾಮಾಜಿಕ ಕಳಕಳಿ ಶ್ಲಾಘಿಸಿದರು.
ಎನ್. ವೆಂಕಟೇಶ್ ಮಾತನಾಡಿ, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅದನ್ನು ದುರಸ್ತಿಗೊಳಿಸಬೇಕೆಂದು  ಅಧಿಕಾರಿಗಳಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement