9 ಶಿಫಾರಸು ಕೇಂದ್ರ ಈಡೇರಿಸಿದೆ: ಹೆಗ್ಡೆ
ಕನ್ನಡಪ್ರಭ ವಾರ್ತೆ ಕೊಪ್ಪ ಮಾ.2: ಅಡಕೆ ಹಳದಿ ಎಲೆರೋಗ ಪೀಡಿತ ಬೆಳೆಗಾರರಿಗೆ ಪರಿಹಾರ ರೂಪದಲ್ಲಿರುವ ಗೋರಖ್ ಸಿಂಗ್ ಶಿಫಾರಸ್ಸುಗಳ 10 ಸಲಹೆಗಳಲ್ಲಿ 9 ನ್ನು ಕೇಂದ್ರ ಸರ್ಕಾರ ಈಡೇರಿಸಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಅಡಕೆ ಪುನಶ್ಚೇತನ, ಅಮದು ಶುಲ್ಕ ಏರಿಕೆ, ಸಾಲ ಮರು ಹೊಂದಾಣಿಕೆ, ಗುಟ್ಕಾ ಉದ್ಯಮಿಗಳಿಗೆ ಅಮದು ಅವಕಾಶ ಮೊದಲಾದ ಕ್ರಮಗಳ ಮೂಲಕ ಅಡಕೆ ಧಾರಣೆ ಸ್ಥಿರತೆಗೆ ಕೇಂದ್ರ ಸರ್ಕಾರ ಪ್ರಯತ್ನಿಸಲಾಗಿದ್ದರೂ ರಾಜ್ಯ ಅಯವ್ಯಯದಲ್ಲಿ ಅಡಕೆ ಬೆಳೆಗಾರರಿಗೆ ಯಾವುದೇ ಪರಿಹಾರ ಪ್ರಕಟವಾಗಿಲ್ಲ ಎಂದು ದೂರಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಬಾಳೆ ಮನೆ ನಟರಾಜ್, ಎಚ್.ಜಿ. ವೆಂಕಟೇಶ್, ಅನ್ಷುಮನ್, ಚನ್ನಗಿರಿ, ಅಸಗೋಡು ನಾಗೇಶ್, ಇನೇಶ್, ನಾರ್ವೆ ಅಶೋಕ್ ಇದ್ದರು.