ಸರ್ಕಾರಗಳಿಂದ ಜನಸಾಮಾನ್ಯರ ಮೇಲೆ ಬರೆ
ಕನ್ನಡಪ್ರಭವಾರ್ತೆ, ಮೂಡಿಗೆರೆ, ಮಾ. 2 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಂದಾಣಿಕೆ ಮಾಡಿಕೊಂಡು ಐದು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಜೆಲ್ ಬೆಲೆಯನ್ನು 20ಕ್ಕೂ ಅಧಿಕ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆಂದು ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಭರತ್ ಆರೋಪಿಸಿದರು.
ಶನಿವಾರ ಬಿಎಸ್‌ಆರ್ ಪಕ್ಷದ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ, ಪಪಂ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಈಗಾಗಲೆ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹಣ, ಹೆಂಡ ಹಂಚಿಕೆ ಮಾಡಲು ವಿವಿಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಚುನಾವಣೆ ಆಯೋಗ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಬಿಎಸ್‌ಆರ್ ಪಕ್ಷದ ಕ್ಷೇತ್ರಾಧ್ಯಕ್ಷ ಎಸ್.ಪಿ. ರಾಜು, ಉಪಾಧ್ಯಕ್ಷ ಜಯಪಾಲ್, ಮಹೇಶ್ ಇದ್ದರು.