ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿಟಿ ಸುದ್ದಿ

Mainashree
Updated On : 3 Mar 2013, 12:14 pm

ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ
ಶೃಂಗೇರಿ: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯೇರಿಕೆ ಮಾಡಿರುವ ಕ್ರಮವನ್ನು ದಸಸಂ, ಜಯಕರ್ನಾಟಕ,ಬಿಜೆಪಿ ನಗರ ಮೋರ್ಚ ತೀವ್ರವಾಗಿ ಖಂಡಿಸಿವೆ. ನಗರ ಮೋರ್ಚ ಅಧ್ಯಕ್ಷ ಮುರುಳಿಧರ ಪೈ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಪದೇ ಪದೇ ಹೆಚ್ಚಿಸುತ್ತಿದೆ.
ಇದರಿಂದ ಜನ ಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ. ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದಸಸಂ (ಪ್ರೊ.ಬಿ. ಕೃಷ್ಣಪ್ಪ ಬಣ) ತಾಲೂಕು ಸಂಚಾಲಕ ಸಾಲ್ಮರ ರವಿ, ಕೇಂದ್ರದ ಈ ಕ್ರಮ ಜನ ವಿರೋಧಿ ನೀತಿಯಾಗಿದೆ. ಪದೇ ಪದೇ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿರುವುದರಿಂದ ಜನರ ಬದುಕು ದುಸ್ತರವಾಗಿದೆ ಎಂದು ಖಂಡಿಸಿದ್ದಾರೆ.
ನಿಷ್ಠೆಯಿಂದ ಕೆಲಸ ನಿರ್ವಹಿಸಿ
ಮೂಡಿಗೆರೆ: ನೌಕರರು ತೂಗುವ ಕತ್ತಿಯ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ಹೊಟ್ಟೆ ಉರಿಸಿ ಕೊಳ್ಳುವ ಬದಲು. ಅವರರವರ ಕೆಲಸವನ್ನು ನಿಷ್ಠೆಯಿಂದ ಮಾಡಿದಲ್ಲಿ ಸಾರ್ವಜನಿಕರಲ್ಲಿ ಉತ್ತಮ ಕೆಲಸಗಾರನೆನಿಸಿಕೊಂಡು ಅಧಿಕಾರಿಗಳಿಂದಲೂ ಪ್ರಶಂಸೆ ಪಡೆದು ಉನ್ನತಿಯನ್ನು ಪಡೆಯಲು ಸಾಧ್ಯ ಎಂದು ತಾಲೂಕ್ ನೌಕರರ ಸಂಘದ ಅಧ್ಯಕ್ಷ ಎಂ. ಗಂಗಾಧರ್ ಅಭಿಪ್ರಾಯಿಸಿದರು.
ಮೂಡಿಗೆರೆ ತಾಲೂಕ್ ಕಚೇರಿಯ ಆವರಣದಲ್ಲಿ ಕಂದಾಯ ಇಲಾಖೆಯ ದಾಖಲಾತಿ ವಿಭಾಗದಲ್ಲಿ 37 ವರ್ಷಗಳ ಕಾಲ ಉತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ರಾಮಯ್ಯ ಅವರನ್ನು ಅಭಿನಂದಿಸಿ ಮಾತನಾಡಿದರು. ರಾಮಯ್ಯ ಅವರ ಸೇವಾ ಕಾರ್ಯದ ಬಗ್ಗೆ ಜನ ಮೆಚ್ಚುಗೆ ಪಡೆದ್ದಿದ್ದು. ಅವರ ಹಾದಿಯಲ್ಲೇ ಮುಂದುವರೆಯುವಂತೆ ತಿಳಿಸಿದರು.  ತಹಸೀಲ್ದಾರ್‌ಸೈಯದ್ ಮನೀರ್(ಗ್ರೇಡ್ 2), ತಹಸೀಲ್ದಾರ್ ಅಪ್ಪಾಜಿರಾವ್ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜ್ಞಾನ ದಿನಾಚಾರಣೆ
ಶೃಂಗೇರಿ: ತಾಲೂಕಿನ ಅಡ್ಡಗೆದ್ದೆ ಪಂಚಾಯಿತಿ ತೊರೆಹಡ್ಲು ಸರ್ಕಾರಿ ಪ್ರೌಡಶಾಲಾ ಆವರಣದಲ್ಲಿ ವಿಜ್ಞಾನ ದಿನಾಚಾರಣೆ ನಡೆಯಿತು. ಎನ್.ಆರ್. ಪುರದ ಜ್ವಾಲಮಾಲಿನಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಶಿಕ್ಷಕ ಗಣಪತಿ ತಂತ್ರಿ ವಿಶೇಷ ವಿಜ್ಞಾನದಲ್ಲಿ ಹೊಸ ಅವಿಷ್ಕಾರ ಮತ್ತು ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕ ಸಿ.ಜಿ. ರಾಯ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಬೇಗಾನೆ ಕಾಡಪ್ಪ ಗೌಡ ಇದ್ದರು. ಗುರುಮೂರ್ತಿ ಸ್ವಾಗತಿಸಿ ನಿರೂಪಿಸಿದರು. ಹಡಗಿನಾಳ್ ವಂದಿಸಿದರು.
ಚಿನ್ನಾಭರಣ ಕಳವು
ಶಿವಮೊಗ್ಗ: ನಗರದ ಸಿ.ಎಸ್. ರಾಮಣ್ಣ ರಸ್ತೆಯಲ್ಲಿನ ಮನೆಯೊಂದರಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಅಪಹರಿಸಿರುವ ಘಟನೆ ನಡೆದಿದೆ.  ಡಾ.ಪಿ.ಕೆ. ಲಕ್ಷ್ಮೀನಾರಾಯಣ (70) ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಪತ್ನಿ ಜ್ಞಾಪಕಶಕ್ತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ನೋಡಿಕೊಳ್ಳಲು ಹೋಂ ನರ್ಸಿಂಗ್ ಸರ್ವಿಸ್   ಸಹಾಯ ಪಡೆದುಕೊಂಡಿದ್ದರು. ಆ. 1(2011)ರಿಂದ ಫೆ.23(2013)ರವರೆಗೆ ನಗರದ ವಿವಿಧ ಹೋಂ ನರ್ಸಿಂಗ್ ಸರ್ವಿಸ್ ಸಿಬ್ಬಂದಿ ಇವರ ಮನೆಯಲ್ಲಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಸುಮಾರು ರು. 2 ಲಕ್ಷ  ಮೌಲ್ಯದ ಚಿನ್ನಾಭರಣಗಳ ಕಳವು ಮಾಡಲಾಗಿದೆ ಎಂದು ಕೋಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಪಘಾತ: ಸಾವು
ಶಿವಮೊಗ್ಗ: ಬೈಕ್ ಮತ್ತು ಲಗೇಜ್ ಆಟೋ ನಡುವೆ ಸಂಭಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶರಾವತಿ ನಗದಲ್ಲಿ ನಡೆದಿದೆ. ರಾಜಶೇಖರ್ ಮೃತಪಟ್ಟ ಬೈಕ್ ಸವಾರ. ಇವರು ಬೈಕ್‌ನಲ್ಲಿ ಶರಾವತಿ  ನಗರದ ಹತ್ತಿರ ಬರುತ್ತಿರುವಾಗ ವೇಗವಾಗಿ ಬಂದ ಲಗೇಜ್ ಆಟೋ ಡಿಕ್ಕಿ ಹೊಡೆದಿದ್ದರಿಂದ ರಾಜಶೇಖರ್ ಮೃತಪಟ್ಟಿದ್ದಾರೆ. ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement