ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಭಿವೃದ್ಧಿ ನೋಡಿ ಮಾತನಾಡಿ'

Lingaraj Badiger
Updated On : 4 Mar 2013, 11:08 am

ಕ.ಪ್ರ ವಾರ್ತೆ, ಮೂಡಿಗೆರೆ, ಮಾ.3
ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಅಪರೂಪಕ್ಕೊಮ್ಮೆ ಆಗಮಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುವುದನ್ನು ಬಿಟ್ಟು ಪಟ್ಟಣದ ವಾರ್ಡ್‌ಗಳಿಗೆ ಭೇಟಿ ನೀಡಿ ಆಗಿರುವ ಅಭಿವೃದ್ಧಿಯನ್ನು ಅರಿತು ಮಾತನಾಡಲಿ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನ ಪರಿಷ್ ಸದಸ್ಯೆ ಮೋಟಮ್ಮ ಅವರಿಗೆ ತಿರುಗೇಟು ನೀಡಿದ್ದಾರೆ.
ಅಪರೇಷನ್ ಮೂಲಕ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕಳೆದ ಸಾಲಿನ ಪಪಂನ 11 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಸ್ಥಾನ ಪಡೆದಿದ್ದೀರಿ. ಆದರೇ ಈ ಬಾರಿ ಜೆಡಿಎಸ್‌ನಲ್ಲಿ ಜಯಶಾಲಿಯಾದ ಅಭ್ಯರ್ಥಿಗಳನ್ನು ಅಪರೇಷನ್ ಮಾಡುವುದರ ಮೂಲಕ ಕಾಂಗ್ರೆಸ್‌ತೆಕ್ಕೆಗೆ ಹಾಕಿಕೊಂಡಿರುವ ನೀವು ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಅಭಿವೃದ್ಧಿಯ ಮಹಾಪೂರ: ನಾವು 11 ವಾರ್ಡ್‌ಗಳಲ್ಲಿ ಕೆಲವು ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ. ನಿಮ್ಮ ಸರ್ಕಾರ ಕಳೆದ 50 ವರ್ಷಗಳಿಂದ ಮಾಡದ ಸಾಧನೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೂವರೇ ವರ್ಷದಲ್ಲಿ ಶೇ.100 ರಷ್ಟು ಸಾಧಿಸಿದೆ.
ಹೊಯ್ಸಳ ಕ್ರೀಡಾಂಗಣದ ಅಭಿವೃದ್ಧಿಗೆ ಹಣ, ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಪ್ರಯತ್ನ, ಒಳ ಚರಂಡಿ ಸರ್ವೇ ಆಗಿದ್ದು ಅದಕ್ಕಾಗಿ 1ಕೋಟಿ ಹಣ ಮೀಸಲಿಡಲಾಗಿದೆ. ಘನತ್ಯಾಜ್ಯ ವಸ್ತು ವಿಲೇವರಿ ಗಾಗಿ ಟಿಪ್ಪರ್ ಖರೀದಿಗೆ ಅನುದಾನ ಮೀಸಲಿಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಬಾಕ್ಸ್ ಚರಂಡಿ ಮತ್ತು ಸ್ಲಾಬ್‌ಗಳ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಅನೇಕ ಅಭಿವೃದ್ಧಿ ಬಿಜೆಪಿ ಸರ್ಕಾರದ ಆಡಳಿತದಲ್ಲಾಗಿದೆ ಮತ್ತು ಮುಂದಿನ ದಿನಗಳಲಿ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಜಾರಿಗೊಳಿಸುತ್ತೇವೆ ಎಂಬ ನಿಟ್ಟಿನಲ್ಲಿ ಪ್ರಣಾಳಿಕೆ ಬಿಡುಗೊಡೆ ಗೊಳಿಸಿದ್ದೇವೆ. ಆದರೆ ನಿಮ್ಮ ಆಡಳಿತದಲ್ಲಿ ಆದ ಅಭಿವೃದ್ಧಿಯನ್ನು ಅವಲೋಕಿಸಿಕೊಳ್ಳಿ ಎಂದು ಮೋಟಮ್ಮ ಅವರಿಗೆ ಸವಾಲು ಎಸೆದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಡಿ.ಎಸ್. ಸುರೇಂದ್ರ, ನಗರಾಧ್ಯಕ್ಷ ಚಂದ್ರಶೇಖರ್, ಪುರುಷೋತ್ತಮ ರಾಜ್ ಅರಸ್, ತಾಲೂಕು ಪ್ರಧಾನ ಕಾರ್ಯದರ್ಶಿ ಗಜೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ಇ. ಪ್ರವೀಣ್, ಎಚ್.ಪಿ. ಮಂಜುನಾಥ್, ಶಶಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement