ಉಚಿತ ಬ್ರಹ್ಮೋಪದೇಶ
ತರೀಕೆರೆ: ಶ್ರೀ ಮಾತಾ ಗಾಯಿತ್ರಿ ಪ್ರತಿಷ್ಠಾನದಿಂದ ಪಟ್ಟಣದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ವಿಜಯನಾಮ ಸಂವತ್ಸರದ ವೈಶಾಖ ಶುಕ್ಲ ಪಕ್ಷ ದ್ದಾದಶಿ ಮೇ 22 ರಂದು ಬುಧವಾರ ಬೆಳಿಗ್ಗೆ 10-30ಕ್ಕೆ 13ನೇ ಉಚಿತ ಸಾಮೂಹಿಕ ಬ್ರಹ್ಮೋಪದೇಶ ನೆಡೆಸಲು ತೀರ್ಮಾನಿಸಿದ್ದು, ತ್ರಿಮತಸ್ಥ ಬ್ರಾಹ್ಮಣರು ಇದರ ಉಪಯೋಗ ಪಡೆಯಬೇಕೆಂದು ಕೋರಲಾಗಿದೆ.
ಪ್ರತಿಷ್ಠಾನದಿಂದ ಚೌಲ, ಉಪನಯನ ಮತ್ತು ವಿವಾಹದ ಕಾರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿವರಗಳಿಗಾಗಿ ಕೆ.ಟಿ. ಲಕ್ಷ್ಮೀನಾರಾಯಣ ಭಟ್ಟ- 9449315740. ಬಿ.ಎಸ್. ಭಗವಾನ್- 8123989104. ಆರ್. ಕೃಷ್ಣಮೂರ್ತಿ- 9448492636. ಲಿಂಗಪ್ಪಯ್ಯ- 9845170400 ಸಂಪರ್ಕಿಸಿ.