ಯುವಚೇತನ: ಸಂತಜೋಸೆಫರ ಶಾಲೆಗೆ ಸಮಗ್ರ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.3
ನಗರದ ಎಂ.ಎಲ್.ವಿ. ಸಭಾಂಗಣದಲ್ಲಿ ರೋಟರಿ ಸಂಸ್ಥೆಯಿಂದ ಒಂದು ವಾರಗಳ ಕಾಲ ನಡೆದ ಯುವಚೇತನ- 2013 ಸ್ಪರ್ಧೆಯಲ್ಲಿ ಸಂತಜೋಸೆಫರ ಬಾಲಕರ ಪ್ರೌಢಶಾಲೆ ಸಮಗ್ರ ತಂಡವಾಗಿ ಹೊರಹೊಮ್ಮಿದೆ.
ಕಣ್ಣು ಕಟ್ಟಿ ಸೈಕಲ್ ಓಡಿಸುವ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಸಚಿನ್- ಪ್ರಥಮ (ಜೆವಿಎಸ್), ಸಯದ್ ಪಾಶಾ- ದ್ವಿತೀಯ (ಮೌಂಟೆನ್ ವ್ಯೂ), ಕೌಶಿಕ್ ಸೌರವ್ ಪ್ರಕಾಶ್ - ತೃತೀಯ (ಸಂತ ಜೋಸೆಫರ ಬಾಲಕರ ಪ್ರೌಢಶಾಲೆ).
ಬಾಲಕಿಯರ ವಿಭಾಗದಲ್ಲಿ ರಮ್ಯ ಮತ್ತು ಕಾವ್ಯ ಎಂ.ಇ.ಎಸ್.ಎಸ್.ಆರ್. ಪ್ರೌಢಶಾಲೆ- ಪ್ರಥಮ, ಮಾಡೆಲ್ ಇಂಗ್ಲಿಷ್ ಶಾಲೆಯ ನೇಹಾ ವೈ. ಕುಮಾರ್, ಅನುಷಾ ದ್ವಿತೀಯ ಸ್ಥಾನ ಪಡೆದರು.
ಜನರಲ್ ಚೆಸ್: ಸಂತ ಜೋಸೆಫರ ಬಾಲಕರ ಪ್ರೌಢಶಾಲೆ- ಪ್ರಥಮ, ಎಂ.ಇ.ಎಸ್.ಎಸ್.ಆರ್.- ದ್ವಿತೀಯ, ಜೆವಿಎಸ್- ತೃತೀಯ, ರ್ಯಾಯಾಪಿಡ್ ಚೆಸ್ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ- ಪ್ರಥಮ, ಟಿಎಂಎಸ್- ದ್ವಿತೀಯ, ಟಿಎಂಎಸ್ ಶಾಲೆಯ ತಂಡ ತೃತೀಯ ಸ್ಥಾನ ಪಡೆಯಿತು.
ನೇಚರ್ ಕ್ವಿಜ್: ಸಂತ ಜೋಸೆಫರ ಬಾಲಕರ ಪ್ರೌಢಶಾಲೆ- ಪ್ರಥಮ, ಎಂ.ಇ.ಎಸ್.ಎಸ್.ಆರ್.- ದ್ವಿತೀಯ, ಮಾಡೆಲ್ ಇಂಗ್ಲಿಷ್ ಶಾಲೆ- ತೃತೀಯ ಹಾಗೂ ಪ್ರತಿ ವರ್ಷದಿಂದ ಮುಗುಳುವಳ್ಳಿ ನಂಜಪ್ಪಶೆಟ್ಟಿ ಮೆಮೋರಿಯಲ್ ನೈಚರ್ ಕ್ವಿಜ್‌ನಲ್ಲಿ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ ರೋಲಿಂಗ್ ಟ್ರೋಫಿ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎನ್. ಶಶಿಕುಮಾರ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಲಿರುವ ಆಸಕ್ತಿಯನ್ನು ಗುರುತಿಸಿ ಅದರಲ್ಲೇ ಮುಂದುವರೆಯಲು ಪೋಷಕರು ಮತ್ತು ಶಿಕ್ಷಕರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.
ಆಸಕ್ತಿ ಇರುವಲ್ಲಿ ಪ್ರೋತ್ಸಾಹಿಸಿ: ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಚಿತ್ರಕಲೆ, ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಕ್ಕಳು ಆಸಕ್ತಿ ಹೊಂದಿರುತ್ತಾರೆ. ಅವರವರ ಆಸಕ್ತಿಗೆ ಅನುಗುಣವಾಗಿ ಪೋಷಕರು ಪ್ರೋತ್ಸಾಹಿಸಿದರೆ ಮುಂದೆ ಆ ಕ್ಷೇತ್ರದಲ್ಲಿ ಅವರು ಹೆಚ್ಚಿನ ಸಾಧನೆ ಮಾಡುತ್ತಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಂ.ಎಸ್. ಜಯಪ್ರಕಾಶ್ ವಹಿಸಿದ್ದರು. ಮಾಜಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕಾರ್ಯಾಧ್ಯಕ್ಷ ರಘು ಸ್ವಾಗತಿಸಿದರು. ಕಾರ್ಯದರ್ಶಿ ಕಾಂತಿಲಾಲ್ ಜೈನ್ ವಂದಿಸಿದರು.