ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Lingaraj Badiger
Updated On : 4 Mar 2013, 11:08 am

ಕನ್ನಡಪ್ರಭವಾರ್ತೆ, ತರೀಕೆರೆ, ಮಾ.3
ಸುವರ್ಣ ಗ್ರಾಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಶಾಸಕ  ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಅವರು ಸಮೀಪದ ಮುಗುಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಒತ್ತಾಸೆ ಕಾರಣ: ಸುವರ್ಣ ಗ್ರಾಮ ಯೋಜನೆಗೆ ಗ್ರಾಮವನ್ನು ಸೇರಿಸಲು ಗ್ರಾಮಸ್ಥರ ಒತ್ತಾಸೆಯೇ ಕಾರಣವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಯೋಜನೆಯನ್ನು ಗುರುತಿಸಲಾಗುತ್ತದೆ. ರು. 43 ಲಕ್ಷ ಆರ್ಥಿಕ ನೆರವು ಉಪಯೋಗಿಸಿಕೊಂಡು ಗುಣಮಟ್ಟದ ಕಾಮಗಾರಿ ಕಾರ್ಯಗಳು ನೆರವೇರಲಿ.  ಬೇರೆ ಅನುದಾನಗಳಿಂದ ಉಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸೋಣ. ಕುಡಿಯುವ ನೀರಿಗೆ ಪೈಪ್‌ಲೈನ್ ಜೋಡಿಸುವ ಕಾರ್ಯವನ್ನು  ಶೀಘ್ರದಲ್ಲಿ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ದೇವರಾಜ್ ಮಾತನಾಡಿ, ಶಾಸಕ ಡಿ.ಎಸ್. ಸುರೇಶ್ ರು. 1 ಕೋಟಿ ಅನುದಾನ ನೀಡಿ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ದೀಪಾ ಉಮೇಶ್, ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ಪ್ರಕಾಶ್,  ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement