ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಮಾಂಜನೇಯ ದೇವಾಲಯದ ಬೆಳ್ಳಿಹಬ್ಬ, ವಿಶೇಷ ಪೂಜೆ

Lingaraj Badiger
Updated On : 4 Mar 2013, 11:09 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.3
ನಗರ ಹೊರವಲಯದ ತೇಗೂರಿನಲ್ಲಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ರಾಮಾಂಜನೇಯ ಸ್ವಾಮಿಯ ದೇವಾಲಯ ಜೀರ್ಣೋದ್ದಾರವಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳ್ಳಿ ಹಬ್ಬದ ಅಂಗವಾಗಿ ಶ್ರೀ ರಾಮಾಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಶ್ರೀ ಮಹಾಗಣಪತಿ ನವಗ್ರಹ ಆಂಜನೇಯ ಮತ್ತು ಶ್ರೀರಾಮತಾರಕ ಹೋಮಗಳು ಜರುಗಿದವು. ಗ್ರಾಮದ ಮಾರುತಿ ಮಹಿಳಾ ಮಂಡಳಿಯಿಂದ ಸಾಮೂಹಿಕ ಭಜನೆ ನಡೆಯಿತು.
ನಂತರ ಶ್ರೀರಾಮಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಹಳ್ಳಿ ವಾದ್ಯಗಳು ಮತ್ತು ನೂರಾರು ಭಕ್ತರ ನಡುವೆ ಗ್ರಾಮದಲ್ಲಿ ನಡೆಸಲಾಯಿತು, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ರಾಜ್ ಅರಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದೇವಾಲಯದ ಜೀರ್ಣೋದ್ದಾರಕ್ಕೆ ಮತ್ತು ಅದರ ಅಭಿವೃದ್ಧಿಗೆ ಶ್ರಮಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವಾಲಯದ ಆರ್ಚಕ ಮಹೇಶ್ ದಂಪತಿ 30 ಸಾವಿರ ವೆಚ್ಚದ ಆಡುಗೆ ಪರಿಕರಗಳನ್ನು ಇದೇ ವೇಳೆ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಗ್ರಾಮದ ಮುಖಂಡರಾದ ತೇಗೂರು ಜಗದೀಶ್, ಭೀಮರಾಜು, ನಿವೃತ್ತ ಪಶು ಪರೀಕ್ಷಕ ಲಕ್ಷಣರಾಜು, ಜನಕರಾಜ ಅರಸ್, ವೆಂಕಟರಾಜು, ಗಂಗರಾಜು, ಗಂಗಮಾಳಮ್ಮ ರಾಮರಾಜ್, ಶ್ರೀಕಾಮಧೇನು ಗಣಪತಿ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement