'ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಉದ್ದೇಶ'
ತರೀಕೆರೆ: ಪುರಸಭೆಯಂತಹ ಸ್ಥಳೀಯ ಸಂಸ್ಥೆಗಳಿಗೆ ಸ್ವಯಂ ಅಧಿಕಾರ ನೀಡುವುದೇ ಪಕ್ಷದ ಉದ್ದೇಶ ಎಂದು ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ವಕ್ತಾರ ಪ್ರೊ. ರವೀಂದ್ರ ರೇಷ್ಮೆ ತಿಳಿಸಿದ್ದಾರೆ.
ಭಾನುವಾರ ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಪುರಸಭೆ ಚುನಾವಣೆಗಳು ಪಕ್ಷಕ್ಕೆ ರಂಗ ಪ್ರವೇಶವಿದ್ದ ಹಾಗೆ. ಸದಸ್ಯರಿಗೆ ಆಡಳಿತಾತ್ಮಕ ಬದ್ದತೆ ತರಬೇತಿ ನೀಡಬೇಕು. ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಬೇಕು. ನೀರಿನ ಬವಣೆ ಮತ್ತು ಪೋಲಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಪಕ್ಷದ ಚಂದ್ರಕಲಾ ಅವರು ಮಾತನಾಡಿ, ತರೀಕೆರೆ ಪುರಸಭೆ ಚುನಾವಣೆಯಲ್ಲಿ ಪಕ್ಷದ ನಾಲ್ಕು ಅಭ್ಯರ್ಥಿಗಳು ಮತ್ತು 3 ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜನರ ಒಲುವು ಪಕ್ಷದ ಕಡೆಗೆ ಇದೆ ಎಂದು ತಿಳಿಸಿದರು. ಪಕ್ಷದ ತಾಲೂಕು ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿದರು. ಅನಿಲ್, ಆನಂದ್ ಪ್ರದೀಪ್ ಮತ್ತಿತರರು ಇದ್ದರು.