ಜೆಡಿಎಸ್‌ಗೆ ಗೆಲವು ಖಚಿತ: ದತ್ತ
ಕ.ಪ್ರ.ವಾರ್ತೆ, ಕಡೂರು, ಮಾ.4 ಶುದ್ದ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಕಡೂರು ಹಾಗೂ ಬೀರೂರು ಪಟ್ಟಣಗಳ ಸರ್ವಾಂಗೀಣ ಅಭಿವೃದ್ಧಿಯನ್ನೇ ಪ್ರಮುಖ ಮಾನದಂಡವನ್ನಾಗಿ ಮಾಡಿಕೊಂಡು ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೈ.ಎಸ್.ವಿ. ದತ್ತ ಹೇಳಿದರು.
ಕಡೂರು ಪಟ್ಟಣದ ಹಲವು ವಾರ್ಡುಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡೂರು ಪಟ್ಟಣದಲ್ಲಿ 2008 ರಲ್ಲಿ ಜೆಡಿಎಸ್ ಗೆಲವು ಸಾಧಿಸುವ ಮೂಲಕ ಅಧಿಕಾರ ಪಡೆದು ಕಡೂರು ಪಟ್ಟಣದಲ್ಲಿ ರಸ್ತೆ, ಕುಡಿಯುವ ನೀರಿನ ಘಟಕ, ಶೌಚಾಲಯ ಮತ್ತು ಹಲವಾರು ಬಡಾವಣೆಗಳಿಗೆ ನೂತನ ವಿದ್ಯುದ್ದೀಪ ಅಳವಡಿಕೆ ಸೇರಿದಂತೆ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಪಟ್ಟಣವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಮತಯಾಚನೆ: ಜನರ ಸೇವೆಯೇ ಪ್ರಮುಖವಾಗಿದ್ದು, ತಾವು ಕಡೂರು ಪಟ್ಟಣದ ಪ್ರತಿ ವಾರ್ಡುಗಳ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಗುತ್ತ್ತಿದ್ದು ಮತದಾರ ಜೆಡಿಎಸ್ ಬೆಂಬಲಿಸುತ್ತಿದ್ದಾರೆ ಎಂದರು.
ಅಭ್ಯರ್ಥಿಗಳಾದ ತಿಪ್ಪೇಶ್, ಜಾನಕಿ, ಮಖಂಡ ಲೋಕೇಶ್, ಮಂಜುನಾಥ ಪ್ರಸನ್ನ, ಪ್ರಶಾಂತ್, ಕುಮಾರನಾಯ್ಕ ಇದ್ದರು.