ನರೇಂದ್ರ ಮೋದಿ ಸರ್ವಾಧಿಕಾರಿ: ಬಿ.ಎಲ್. ಶಂಕರ್
ಚಿಕ್ಕಮಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿ, ವಿಭಜಕ ಮನಸ್ಥಿತಿವುಳ್ಳವರು ಎಂದು ಕೆಪಿಸಿಸಿ ವಕ್ತಾರ ಬಿ.ಎಲ್. ಶಂಕರ್ ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೊಬ್ಬರನ್ನು ಸಹಿಸುವ ಗುಣವಿಲ್ಲದ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆರ್ಥಿಕ ತಜ್ಞರು ಎಂದು ಅಮೆರಿಕದ ಅಧ್ಯಕ್ಷ ಒಬಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂಥ ಪ್ರಧಾನಿಯನ್ನು ಮೋದಿ ರಾತ್ರಿ ಕವಾಲುಗಾರರೆಂದು ಟೀಕಿಸಿದ್ದಾರೆ. ಪ್ರಧಾನಿ ಬಗ್ಗೆ ಈವರೆಗೆ ಅಟಲ್ ಜೀ, ಆಡ್ವಾಣಿ ಸೇರಿದಂತೆ ಯಾರೂ ಕೂಡ ವ್ಯಕ್ತಿಗತವಾಗಿ ಟೀಕೆ ಮಾಡಿರಲಿಲ್ಲ. ಆದರೆ, ಮೋದಿ ಅವರು ಟೀಕಿಸುವ ಮೂಲಕ ಈ ದೇಶದ ಅತ್ಯುನ್ನತ ಹುದ್ದೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ವಿಶೇಷವಾದ ಸ್ಥಾನಮಾನವಿದೆ. ಇಲ್ಲಿನ ತೀರ್ಮಾನಗಳು ಮಾದರಿಯಾಗಬೇಕು. ಆದರೆ, ಸ್ಪೀಕರ್ ಅವರು ಆ ಸ್ಥಾನವನ್ನು ಮರೆತು ಬಿಜೆಪಿಯ ಮುಖಂಡರಂತೆ ವರ್ತಿಸುತ್ತಿದ್ದಾರೆ ಎಂದರು.