ಶೃಂಗೇರಿ ಪಪಂ: ಜೆಡಿಎಸ್ಗೆ ವಿಶ್ವಾಸ
ಕೊಪ್ಪ: ಶೃಂಗೇರಿ ಕ್ಷೇತ್ರದ ಮೂರು ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಸಾಧಿಸುವ ವಿಶ್ವಾಸವಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಹೇಳಿದರು.
ಸೋಮವಾರ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾದ ಮತಯಾಚನೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊಪ್ಪ, ಶೃಂಗೇರಿ, ಎನ್.ಆರ್. ಪುರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರವಾಸ ಮಾಡಿದ್ದು, ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯ ಭ್ರಷ್ಟಾಚಾರ, ಸ್ವಜನಪಕ್ಷ ಆಡಳಿತ ದಿಂದ ಜನ ಬೇಸರ ಹೊಂದಿದ್ದಾರೆ. ಅಧಿಕಾರಕ್ಕೆ ಬಂದ ಬಿಜೆಪಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಗೊಂದಲದಲ್ಲೆ ಕಾಲ ಕಳೆದರು ಎಂದು ದೂರಿದರು.
ಮತದಾರರಲ್ಲಿ ಮತಯಾಚನೆ ಮಾಡುವ ಸಮಯದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಣವೆ ವಿನಯ್, ತಾಲೂಕು ಅಧ್ಯಕ್ಷ ಕೆ.ಕೆ. ಸಾಯಿನಾಥ್, ಪಕ್ಷದ ಮುಖಂಡರಾದ ಕಡಪ್ಪಗೌಡ, ಎಚ್.ಡಿ.ಶ್ರೀನಿವಾಸ್, ಎಚ್.ಕೆ. ಸುರೇಶ್, ಎಚ್.ಆರ್. ಸಂಜೀವ ಮತ್ತು ವಾರ್ಡ್ನ ಅಭ್ಯರ್ಥಿಗಳು, ಮತ್ತಿತರು ಇದ್ದರು.