ಮಹಿಳೆಯರು ಸಮಸ್ಯೆಗಳ ವಿರುದ್ಧ ಹೋರಾಡಿ
ಕನ್ನಡಪ್ರಭವಾರ್ತೆ, ತರೀಕೆರೆ, ಮಾ.5
ಮಹಿಳೆಯರು ಒಗ್ಗಟ್ಟಾಗಿ ಸಮಸ್ಯೆಗಳ ವಿರುದ್ಧ ಹೋರಾಡಬೇಕು ಎಂದು ಪಟ್ಟಣದ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ. ವರ್ಗೀಸ್ ಕ್ಲೀಟಸ್ ತಿಳಿಸಿದ್ದಾರೆ.
ವಿಕಸನ ಸಂಸ್ಥೆ, ದಿ ಹಂಗರ್ ಪ್ರಾಜೆಕ್ಟ್ ಬೆಂಗಳೂರು, ಯು.ಎನ್. ವುಮೆನ್ ವತಿಯಿಂದ ಸಮೀಪದ ಕೆ. ಚಟ್ಟನಹಳ್ಳಿ ವಿಕಸನ ಮಾನವ ಸಂಪನ್ಮೂಲ ಅಬಿವೃದ್ಧಿ ಕೇಂದ್ರದಲ್ಲಿ ಮಹಿಳಾ ಕಾನೂನು,ಮಾನವ ಹಕ್ಕುಗಳು ಕುರಿತು ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ಏರ್ಪಾಡಾಗಿದ್ದ 2 ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ಮನೋಹರ್ ಸಿಕ್ರಂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾನವ ಹಕ್ಕುಗಳು, ಸಮಾಜದ ವ್ಯವಸ್ಥೆ. ಮಹಿಳಾ ಕಾನೂನುಗಳನ್ನು ಕುರಿತು ಅರಿವು ಮೂಡಿಸಿದರು.
ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಗಳೂರು ಜಿಲ್ಲೆಯ ಆಯ್ದ ತಾಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿಕಸನ ಸಂಸ್ಥೆ ಸಂಯೋಜಕರಾದ ಕೆ.ಶ್ರೀನಿವಾಸ್, ಎಂ.ಎಚ್. ಲಕ್ಷ್ಮಣ್ ಕಾರ್ಯಕ್ರಮ ನಿರ್ವಹಿಸಿದರು.