ಸಂಘಟನೆಗಳು ಸಮಾಜ ಕಟ್ಟಲು ಮುಂದಾಗಲಿ
ಕ.ಪ್ರ ವಾರ್ತೆ, ಶೃಂಗೇರಿ, ಮಾ.5
ಪ್ರತಿಯೊಂದು ಸಂಘಟನೆಗಳು ಸಮುದಾಯದ ಒಳಿತಿಗಾಗಿ ಶ್ರಮಿಸುವುದರ ಜೊತೆಗೆ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಕೊಪ್ಪ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಚಂದ್ರಶೇಖರ ಕೆಸವೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಜಿಎಸ್ಬಿ ಸಭಾಂಗಣದಲ್ಲಿ ನಡೆದ ಮರಾಠಿ ಸಮಾಜ ಸೇವಾ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಾಜನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಚಂದ್ರನಾಯ್ಕ್, ಕೃಷ್ಣನಾಯ್ಕ್, ಗೀತ, ನಾಗರಾಜ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಉದಯ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣೇಶ್, ಸಹಕಾರ್ಯದರ್ಶಿಯಾಗಿ ಅವಿನಾಶ್, ಶಿವಶಂಕರ್, ಖಜಾಂಚಿಯಾಗಿ ಅಶೋಕ್ ನಾಯಕ್, ನಾಗೇಂದ್ರ, ಮಂಜುನಾಥ್, ಪ್ರಸನ್ನ ನಾಯಕ್ ಅಧಿಕಾರ ಸ್ವೀಕರಿಸಿದರು.