ಸುನೀಲ್ ರಾಜಿನಾಮೆ
ಮೂಡಿಗೆರೆ: ಜೆಡಿಎಸ್‌ನ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೂಡಿಗೆರೆಯ ಸುನೀಲ್ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಕುರಿತು ಹೇಳಿಕೆ ನೀಡಿ, ಜಾತ್ಯತೀತ ಜನತಾದಳದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಜೆಡಿಎಸ್ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾದ ಪಕ್ಷವಾಗಿದೆ. ಅಲ್ಪಸಂಖ್ಯಾತ ಹಾಗೂ ಎಲ್ಲ ವರ್ಗದ ಜನರ ಆಧಾರಸ್ತಂಭವಾಗಿರುವ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.
8ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ತರೀಕೆರೆ: ಲಿಂಗದಹಳ್ಳಿ ಎಂಯುಎಸ್‌ಎಸ್‌ನಲ್ಲಿ ಹೊಸದಾಗಿ ಸ್ಥಾಪಿಸುವ 6.3 ಎಂ.ವಿ.ಎ ಪರಿವರ್ತಕಕ್ಕೆ ಜಂಪ್ ಹಾಕುವುದಕ್ಕೆ ಮತ್ತು ಇತರೆ ಕೆಲಸಗಳಿಗೆ ಮಾರ್ಗಮುಕ್ತತೆಯನ್ನು ಬೃಹತ್ ಕಾಮಗಾರಿ ವಿಭಾಗ, ಶಿವಮೊಗ್ಗ ಇವರು ಪಡೆಯುವುದರಿಂದ ಮಾ.8ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಿಂಗದಹಳ್ಳಿ, ಯರದಂಕಲು, ಉಡೇವ, ನಂದಿಬಟ್ಟಲು, ಹುಲಿತಿಮ್ಮಾಪುರ, ತ್ಯಾಗದಬಾಗಿ, ಕಂಜಾಪುರ, ದೊಡ್ಡಲಿಂಗೇನಹಳ್ಳಿ ಮತ್ತು ಇತರ ಸ್ಥಳಗಳಿಗೆ ವಿದ್ಯುತ್ ವ್ಯತ್ಯಾಸವಾಗುವುದರಿಂದ ಆ ಭಾಗದ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತರೀಕೆರೆ ಉಪ ವಿಭಾಗದವರು ಕೋರಿದ್ದಾರೆ.
ಅಕ್ರಮ ಮದ್ಯ ಸಾಗಾಟ: ಬಂಧನ
ಶಿವಮೊಗ್ಗ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ಬಂಧಿಸಿದ ಘಟನೆ ಮಂಗಳವಾರ ಸಂಜೆ ನಗರದ ನ್ಯೂಮಂಡ್ಲಿ ಬಳಿ ನಡೆದಿದೆ. ಜಿಲ್ಲಾ ವಿಚಕ್ಷಣದಳ ರಸ್ತೆ ಕಾವಲು ನಡೆಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಎಸ್. ವೆಂಕಟೇಶ್ ರೆಡ್ಡಿ ಎಂಬತಾನನ್ನು ಬಂಧಿಸಲಾಗಿದೆ. ಮೂಲತಃ ಶಾಂತಿನಗರದ ನಿವಾಸಿಯಾಗಿದ್ದು, ತನ್ನ ಆಟೋದಲ್ಲಿ 10 ಬಾಕ್ಸ್ ಮದ್ಯವನ್ನು ಸಾಗಿಸುತ್ತಿದ್ದನು. ಜಿಲ್ಲಾ ವಿಚಕ್ಷಣದಳ ಆಟೋ ತಡೆದು ಪರಿಶೀಲನೆ ನಡೆಸಿ, ತನಿಖೆಗೆ ಒಳಪಡಿಸಿದೆ. ಆರೋಪಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಸಾಗಾಟ ಮಾಡುತ್ತಿದನ್ನೋ ಅಥವಾ ಬೇರೆ ಕಾರಣಕ್ಕೆ ಸಾಗಾಟ ಮಾಡುತ್ತಿದನ್ನೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಯನ್ನು 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ. ಆರೋಪಿಯಿಂದ ಆಟೋ ಹಾಗೂ ಮದ್ಯ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು 1.5 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ದಾಖಲಾಗಿದೆ. ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಸಿಬ್ಬಂದಿಗಳಾದ ಮಂಜಪ್ಪ, ಚಂದ್ರಪ್ಪ, ವೆಂಕಟೇಶ್ ಇದ್ದರು.