ಹಾದಿಕೆರೆಯಲ್ಲಿ ಬೆಂಕಿ ಆಕಸ್ಮಿಕ
ಕ.ಪ್ರ ವಾರ್ತೆ, ತರೀಕೆರೆ, ಮಾ.5
ಸಮೀಪದ ಹಾದಿಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ 9ರ ಸಮಯದಲ್ಲಿ ಲಕ್ಷ್ಮೀಶ ಎನ್ನುವವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಕೊಟ್ಟಿಗೆಯಲ್ಲಿದ್ದ ಸಿಂದಿ ಹಸು ಮತ್ತು ಎರಡು ಎತ್ತುಗಳಿಗೆ ಗಾಯಗಳಾಗಿದೆ. ಮನೆಯಲ್ಲಿದ್ದ ಬಟ್ಟೆ ಮತ್ತಿತರ ಪದಾರ್ಥಗಳು ಬೆಂಕಿಯಿಂದಾಗಿ ಸುಟ್ಟುಹೋಗಿದೆ. ಸುದ್ದಿ ತಿಳಿದ ಕೂಡಲೇ ತರೀಕೆರೆಯಿಂದ ಆಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿತು.