9ರಂದು ಗಣಿತ ವಿಜ್ಞಾನ ವಿಚಾರ ಸಂಕಿರಣ
ಕೊಪ್ಪ: ಅನ್ವಯಿಕ ಗಣಿತ ವಿಜ್ಞಾನ ರಾಷ್ಟ್ರೀಯ ವಿಚಾರ ಸಂಕಿರಣ 9 ರಂದು ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಕೆ.ಸಿ. ವೆಂಕಟೇಶ್ ತಿಳಿಸಿದ್ದಾರೆ.
ಸಂಕಿರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಉದ್ಘಾಟಸಲಿದ್ದು,ಗಣಿತ ತಜ್ಞ ಬಿ.ಎಸ್. ಬಾಗೇವಾಡಿ ಪ್ರಧಾನ ಭಾಷಣ ಮಾಡಲಿದ್ದಾರೆ. ಈಗಾಗಲೇ 40 ಪ್ರಬಂಧಗಳು ನೊಂದಾಯಿತವಾಗಿದ್ದು ಅವುಗಳು ವಿಚಾರ ಸಂಕಿರಣದಲ್ಲಿ ಮಂಡನೆಯಾಗಲಿವೆ. ಹೈದರಾಬಾದಿನ ಉಸ್ಮಾನಿಯ ವಿವಿಯ ಬಿ. ಶಂಕರ್, ತಿರುಪತಿ ವಿವಿಯ ಶ್ರೀನಾಥ್, ಬೆಂಗಳೂರು ವಿವಿಯ ಎಚ್.ಜಿ. ನಾಗರಾಜ್, ಪ್ರೊ. ಸಿದ್ದಬಸಪ್ಪ ಪಾಲ್ಗೊಳ್ಳಲಿದ್ದಾರೆ. ಕುವೆಂಪು ವಿವಿಗೆ ಒಳಪಟ್ಟ ವಿವಿಧ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಈ ವಿಚಾರ ಸಂಕಿರಣಕ್ಕೆ ಆಸಕ್ತರು ಭಾಗವಹಿಸಬಹುದಾಗಿದ್ದು ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಹೇಳಿದರು.