ಜನತೆಯ ಅಗತ್ಯಕ್ಕೆ ಸ್ಪಂದನೆ ಲಯನ್ಸ್ ಗುರಿ
ಶೃಂಗೇರಿ: ವಿಶ್ವಶಾಂತಿ ಉದ್ದೇಶದಿಂದ ಸ್ಫಾಪಿಸಲ್ಪಟ್ಟ ಲಯನ್ಸ್ ಸಂಸ್ಥೆ ಜನರ ಅ ಗತ್ಯಗಳಿಗೆ ಸ್ಪಂದಿಸುವಂತೆ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ಸದಾಶಿವ ತಿಳಿಸಿದರು.
ಅವರು ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ,
ರೈತರಲ್ಲಿ ಕೃಷಿ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಪರಿಸರ, ಆರೋಗ್ಯ, ಶಿಕ್ಷಣ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಪಟ್ಟಣದ ಪ್ರಮುಖ ವೃತ್ತಗಳಿಗೆ ನಾಮಪಲಕ ಅಳವಡಿಕೆ, ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಲಯನ್ ರಾಜಶೇಖರ್, ಉಮೇಶ್ ಪುದುವಾಳ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ವಿತರಣೆ
ಶೃಂಗೇರಿ: ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಟೇಕ್ವಾಂಡೋ 5 ನೇ ಬೆಲ್ಟ್ ಬೆಸ್ಟ್ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.
ಬಿ.ಎನ್. ಪ್ರಸನ್ನ ಪ್ರಶಸ್ತಿ ಪತ್ರ ಹಾಗೂ ಬೆಲ್ಟ್ ವಿತರಿಸಿ ಮಾತನಾಡಿ, ಯುವಕರು ಕರಾಟೆ ಕಲೆಯತ್ತ ಆಕರ್ಷಿತರಾಗಬೇಕು. ಕರಾಟೆ ಒಂದು ಆತ್ಮ ರಕ್ಷಣೆಯ ಕಲೆಯಾಗಿದೆ ಎಂದರು. ರಂಜಿತ್ ಇದ್ದರು.