ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್ ಗೆಲವು ನಿಶ್ಚಿತ: ಉಮಾಪತಿ ವಿಶ್ವಾಸ

Lingaraj Badiger
Updated On : 7 Mar 2013, 10:49 am

ಕ.ಪ್ರ.ವಾರ್ತೆ ಮೂಡಿಗೆರೆ   ಮಾ.5
ಈ ಬಾರಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೂಡಿಗೆರೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ವಾರ್ಡ್‌ಗಳಲ್ಲಿ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮತಯಾಚನೆ ಮಾಡಲು ಪ್ರಣಾಳಿಕೆಯೊಂದಿಗೆ ಜನರ ಬಳಿ ಹೋಗಿದ್ದ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ದುರಾಡಳಿತ ಕಂಡು ನಿರಾಶರಾಗಿರುವ ಜನರು, ಜೆಡಿಎಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷದಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಸಮರ್ಥ ಅಭ್ಯರ್ಥಿ ಆರಿಸಿ: 9ನೇ ವಾರ್ಡ್‌ನಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದಿದ್ದ ಹಿನ್ನಲೆಯಲ್ಲಿ ಕೆಲವರಿಗೆ ಸಂಶಯವನ್ನುಂಟು ಮಾಡಿದೆ. 9ನೇ ವಾರ್ಡ್‌ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಅದು ಜೆಡಿಎಸ್‌ಗೆ ಗೆಲುವು ಖಂಡಿತವಾಗಿತ್ತು. ಆದರೆ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿ ಸಿಗದಿದ್ದ ಕಾರಣ ಕಣಕ್ಕಿಳಿಸಲು ಆಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ದೇವರಾಜು, ಗಬ್ಬಳ್ಳಿ ಚಂದ್ರೇಗೌಡ, ಮಂಡಿ ಲಕ್ಷ್ಮಣ್, ಕಣಚೂರ್‌ರಾಜೇಂದ, ಹಂಜಾದ್, ರವಿ, ಸುರೇಂದ್ರ, ರಾಮಣ್ಣ, ಲೋಹಿತ್, ಅಜಿತ್‌ಕುಮಾರ್, ಸಂದೇಶ, ಜಯಪಾಲ್, ಸತೀಶ್‌ಗೌಡ, ರವಿ, ಪದ್ಮಯ್ಯ ಮತ್ತಿತರರು ಇದ್ದರು.

ಪಕ್ಷಕ್ಕೆ ಸೇರ್ಪಡೆ
ಮೂಡಿಗೆರೆ: ವಿವಿಧ ಪಕ್ಷಗಳನ್ನು ತ್ಯಜಿಸಿ ಜೆಡಿಎಸ್‌ಗೆ ಬಂದ ಮುಖಂಡರ ಸೇರ್ಪಡೆ ಕಾರ್ಯಕ್ರಮ ಬುಧವಾರ ಮೂಡಿಗೆರೆ ಪಟ್ಟಣದ ಜೆ.ಎಂ.ರಸ್ತೆಯ 10ನೇ ವಾರ್ಡ್‌ನ ಕಚೇರಿಯಲ್ಲಿ ಬುಧವಾರ ನಡೆಯಿತು.
ಈ ಸಮಯದಲ್ಲಿ ನೂತನವಾಗಿ ಸೇರ್ಪಡೆಗೊಂಡ ಮುಖಂಡ ಶಬ್ಬೀರ್ ಅವರನ್ನು ಪಕ್ಷದ ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಸತ್ತಾರ್ ಸಾಬ್‌ರನ್ನು ನೇಮಕಗೊಳಿಸಲಾಯಿತು.
ಮೂಡಿಗೆರೆ ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ, ಮುಖಂಡ ಅಜಿತ್‌ಗೌಡ, ಬಾಲಕೃಷ್ಣೇಗೌಡ, 10ನೇ ವಾರ್ಡ್  ಅಭ್ಯರ್ಥಿ ಅಲ್ತಾಪ್ ಹುಸೇನ್, ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಅಮ್ಜದ್, ಲೋಹಿತ್, ಮಗ್ಗಲಮಕ್ಕಿ ರವಿ, ಗಬ್ಬಳ್ಳಿ ಚಂದ್ರೇಗೌಡ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement