ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶ್ರೀಕಂಠಪ್ಪ ಸರಳ ರಾಜಕಾರಣಿ

Lingaraj Badiger
Updated On : 7 Mar 2013, 10:42 am

ಕಪ್ರ ವಾರ್ತೆ, ಚಿಕ್ಕಮಗಳೂರು
ಮಾಜಿ ಸಂಸದ ದಿವಂಗತ ಡಿ.ಸಿ. ಶ್ರೀಕಂಠಪ್ಪ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದು, ಎಲ್ಲಾ ಸಮುದಾಯ, ಜಾತಿಯ ವಿಶ್ವಾಸಗಳಿಸಿ ಆದರ್ಶಪ್ರಾಯರಾಗಿದ್ದರು ಎಂದು ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಹೇಳಿದರು.
 ಇಲ್ಲಿನ ಆಶಾಕಿರಣ ಅಂಧಮಕ್ಕಳ ಶಾಲೆಯ ಸಭಾಂಗಣದಲ್ಲಿ ಗುರುವಾರ ಡಿ.ಸಿ. ಶ್ರೀಕಂಠಪ್ಪ ಅಭಿಮಾನಿಗಳ ಸಂಘ ಏರ್ಪಡಿಸಿದ್ದ ಶ್ರೀಕಂಠಪ್ಪರವರ 84ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀಕಂಠಪ್ಪ ಪ್ರಾಮಾಣಿಕ ಹಾಗೂ ಶುದ್ಧಹಸ್ತದ ರಾಜಕಾರಣಿಯಾಗಿದ್ದರು ಎಂದರು.
ಪವಿತ್ರ ಕೆಲಸ: ರಾಜಕಾರಣ ಎಂದರೆ ಪವಿತ್ರ ಕೆಲಸ. ಇದರಲ್ಲಿ ಒಳ್ಳೆಯ ಕೆಲಸ ಮಾಡುವ ಅವಕಾಶವಿರುತ್ತದೆ. ಅದನ್ನು ಶ್ರೀಕಂಠಪ್ಪ ಸಮರ್ಪಕವಾಗಿ ಮಾಡಿದ್ದರು. ಈಗ ರಾಜಕಾರಣಿ ಎಂದರೆ ಅಪಹಾಸ್ಯ ಮಾಡುವ ಸ್ಥಿತಿ ಬಂದಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಹಲವು ನಾಯಕರು ದೇಶದಲ್ಲಿದ್ದರು. ಅವರಂತೆ ಡಿ.ಸಿ. ಶ್ರೀಕಂಠಪ್ಪ ಹಳ್ಳಿ ಹಳ್ಳಿಗಳಲ್ಲಿ ಬಹಳ ಗೌರವದಿಂದ ಅವರ ಕೆಲಸಗಳನ್ನು ನೆನೆಸಿಕೊಳ್ಳುತ್ತಾರೆ. ಇದು ಅವರ ಕರ್ತವ್ಯ  ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಮಾತನಾಡಿ, ಕಲುಷಿತ ರಾಜಕಾರಣದಲ್ಲಿ ಜನಪ್ರತಿನಿಧಿಗಳು ಸೇವಾ ಮನೋಭಾವ ಮರೆತು ದಿನನಿತ್ಯ ಅವ್ಯವಹಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಸಂದಭಂದಲ್ಲಿ ಪ್ರಾಮಾಣಿಕ ಹಾಗೂ ಶುದ್ಧಹಸ್ತ ರಾಜಕಾರಣಿಯಾಗಿದ್ದ ಶ್ರೀಕಂಠಪ್ಪನವರನ್ನು ನೆನೆಪಿಸಿಕೊಳ್ಳಬೇಕಾಗುತ್ತದೆ ಎಂದರು.
ಅಂಧಮಕ್ಕಳ ಶಾಲೆ: ಸಮಾರಂಭದಲ್ಲಿ ಉಪಸ್ಥಿತರಿದ್ದ ಡಿ.ಸಿ. ಶ್ರೀಕಂಠಪ್ಪನವರ ಪತ್ನಿ ಲಲಿತಮ್ಮ ಮಾತನಾಡಿ, ಅವರಿಗೆ ಅಂಧಮಕ್ಕಳ ಶಾಲೆ ಬಗ್ಗೆ ಬಹಳ ಒಲವಿತ್ತು. ಅವರ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸುತ್ತಿರುವುದು ನಮ್ಮ ಕುಟುಂಬಕ್ಕೆ ಸಂತಸ ತಂದಿದೆ. ಅವರು ಸಂಸದರಾಗಿದ್ದಾಗ ಎಲ್ಲಾ ವರ್ಗದವರನ್ನೂ ಪ್ರೀತಿಸುತ್ತಿದ್ದರು. ಯಾವುದೇ ಕೆಲಸವನ್ನಾದರೂ ಗೌರವದಿಂದ ಮಾಡುತ್ತಿದ್ದರು ಎಂದರು.
  ಹಿರಿಯರಾದ ಸುಬ್ಬೇಗೌಡ, ನಾಗರಾಜ್ ಶ್ರೀಕಂಠಪ್ಪ, ಅಶೋಕ್ ಶ್ರೀಕಂಠಪ್ಪ, ಡಾ. ಮೋಹನ್ ಉಪಸ್ಥಿತರಿದ್ದರು. ಲಕ್ಷ್ಮಣಗೌಡ ಸ್ವಾಗತಿಸಿದರು, ನಸ್ರುಲ್ಲಾ ಷರೀಫ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement