ಸ್ಫೂರ್ತಿ ತಂಡದ ಸಾಧನೆ
ಶೃಂಗೇರಿ: ಮಧ್ಯಪ್ರದೇಶದ ದಿಂದೇವಾಡದಲ್ಲಿ ನೆಹರು ಯುವ ಕೇಂದ್ರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಸ್ಥಳೀಯ ಗೋಚವಳ್ಳಿ ಸ್ಪೂರ್ತಿ ಯುವಕ ಸಂಘದ 20 ಸದಸ್ಯರ ತಂಡ ಪಾಲ್ಗೊಂಡು ಕರ್ನಾಟಕದ ಪರ ಜಾನಪದ ಕಲಾಪ್ರಕಾರಗಳಾದ ಮರಗಾಲು ನೃತ್ಯ, ಕೋಲಾಟ, ಕೊರಗರ ನೃತ್ಯ, ಜಾನಪದ ಗೀತೆ ಕಲಾ ಪ್ರಕಾರ ಪ್ರದರ್ಶಿಸಿ ಜನಮನ ಸೆಳೆಯಿತು.
ಉತ್ತಮ ಪ್ರದರ್ಶನದೊಂದಿಗೆ ಪ್ರಶಸ್ತಿಗಳಿಸಿತು. ಈ ತಂಡದಲ್ಲಿ 7 ಕ್ಕೂ ಅಧಿಕ ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದವು.
ರಸ್ತೆ ದರಸ್ತಿಗೆ ಆಗ್ರಹ
ಶೃಂಗೇರಿ: ತಾಲೂಕಿನ ತಾರೋಳ್ಳಿಕೊಡಿಗೆ, ಮಲ್ಲಂದೂರು ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ತಾರೋಳ್ಳಿಕೊಡಿಗೆ ಕುಗ್ರಾಮವನ್ನು ಸೇರಬೇಕಾದರೆ ಬೇಗಾರಿನಿಂದ 8 ಕಿ.ಮಿ.ದೂರವಿರುವ ಕೋಟೆ ತಾರೋಳ್ಳಿ ಕೊಡಿಗೆ ರಸ್ತೆಯಲ್ಲಿ ಸಾಗಬೇಕು.
ನಕ್ಸಲ್ ಪೀಡಿತ ಪ್ರದೇಶವಾಗಿದ್ದು ಸರ್ಕಾರ ರಸ್ತೆ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಪ್ರತಿ ದಿನ ಈ ಮಾರ್ಗದಲ್ಲಿ ಹಲವಾರು ಜನ ಓಡಾಡುತ್ತಿದ್ದು, ಜನಪ್ರತಿನಿದಿಗಳು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ರಸ್ತೆ ದುರಸ್ತಿಪಡಿಸಿ ಗ್ರಾಮಸ್ಥರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.