ಹದ್ದಿನ ಮೀನು ಪತ್ತೆ
ನರಸಿಂಹರಾಜಪುರ: ಭದ್ರಾ ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ಅಪರೂಪ ಎನಿಸಿದ 25 ಕೆಜಿ ತೂಕದ ಹದ್ದಿನ ಮೀನು ಸಿಕ್ಕಿದ್ದು ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.
ಬೇಸಿಗೆಯ ದಿನದಲ್ಲಿ ಭದ್ರಾ ಹಿನ್ನೀರಿನಲ್ಲಿ 2 ಅಥವಾ 3 ಕೆಜಿ ತೂಕದ ಮೀನುಗಳೇ ಸಿಕ್ಕುತ್ತದೆ.ಅಪರೂಪಕ್ಕೆ ಅತಿ ದೊಡ್ಡ ಗಾತ್ರದ ಮೀನು ಬಲೆಗೆ ಬೀಳುತ್ತದೆ. ಬುಧವಾರ ಅಪರೂಪದ 25 ಕೆ.ಜಿ. ತೂಕದ ಹದ್ದಿನ ಮೀನು ಭದ್ರಾ ಹಿನ್ನೀರಿನಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಆ ಮೀನನ್ನು ಪಟ್ಟಣದ ಮೀನು ಮಾರುಕಟ್ಟೆಯ ಭದ್ರಾ ಪಿಶ್ ಸ್ಟಾಲ್ ಬಷೀರ್ ಎಂಬ ವ್ಯಾಪಾರಿಗೆ ಮಾರಾಟ ಮಾಡಲಾಗಿತ್ತು.
--
122 ಮಕ್ಕಳಿಗೆ ಪೋಲಿಯೋ ಹನಿ
ತರೀಕೆರೆ: ಸಾರ್ವಜನಿಕ ಆಸ್ಪತ್ರೆಯಿಂದ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ 122 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು.
ವಿಜ್ಞಾನ ಇಂಡಸ್ಟ್ರೀಸ್ ಪ್ರದಾನ ವ್ಯವಸ್ಥಾಪಕ ಎಚ್.ಎಸ್. ಪ್ರಕಾಶ್ ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಗಣೇಶ್, ಡಾ. ಜಗದೀಶ್, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.