ಬೀರೂರಿನಲ್ಲಿ ಶೇ. 80 ಮತದಾನ
ಬೀರೂರು: ಪಟ್ಟಣದಲ್ಲಿ ಶಾಂತಿಯುತ ಮತದಾನ ನಡೆದು ಶೇ.80 ರಷ್ಟು ಮತದಾನ ಆಗಿದೆ. 23 ವಾರ್ಡುಗಳಲ್ಲಿ ಒಟ್ಟು 15,311 ಮತದಾರರಿದ್ದು, ಅದರಲ್ಲಿ 12,457 ಜನ ಮತ ಚಲಾಯಿಸಿದ್ದಾರೆ. ಬೆಳಿಗ್ಗೆಯಿಂದಲೇ ಬಿರುಸಿನಿಂದ ನಡೆದ ಮತದಾನ ಪ್ರಕ್ರಿಯೆ ಬಿಗಿ ಬಂದೋಬಸ್ತಿನಿಂದಕೂಡಿದ್ದು, ಎಲ್ಲಿಯೂ ಗೊಂದಲಗಳಿಗೆ ಅವಕಾಶ ನೀಡದೆ ಚುರುಕಿನಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. 23ನೇ ವಾರ್ಡ್‌ನಲ್ಲಿ 800 ಮತಗಳಿಗೆ 677 ಮತ ಚಲಾವಣೆಯಾಗಿ ಹೆಚ್ಚು ಮತದಾನ ನಡೆದ ಮತಗಟ್ಟೆಯಾದರೆ, 4ನೇ ವಾರ್ಡ್‌ನಲ್ಲಿ 725 ಮತಗಳಲ್ಲಿ 622 ಮತದಾನವಾಗಿ ಅತಿ ಕಡಿಮೆ ಮತದಾನವಾದ ಕೇಂದ್ರವಾಗಿದೆ. 9ನೇ ವಾರ್ಡ್‌ನಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಕೂಡಲೆ ಸರಿಪಡಿಸಿ ಮತ್ತೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಒಟ್ಟಾರೆ ಪಟ್ಟಣದಲ್ಲಿ ಗೊಂದಲಗಳಿಲ್ಲದೆ ಶಾಂತಿಯುತ ಮತದಾನದ ಮೂಲಕ ಚುನಾವಣೆ ಅಂತ್ಯ ಕಂಡಿತು.
ತರೀಕೆರೆಯಲ್ಲಿ ಶೇ.80 ಮತದಾನ
ತರೀಕೆರೆ: ಗುರುವಾರ ಪಟ್ಟಣದ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಅಂದಾಜು ಶೇ.80 ರಷ್ಟು ಮತದಾನವಾಗಿದ್ದು, ಬಹುತೇಕ ಎಲ್ಲ ಕಡೆ ಶಾಂತಿಯುತ ವಾತಾವರಣವಿತ್ತು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಬಿಸಿಲಿನ ಝಳ ದಿನಪೂರ್ತಿ ಹೆಚ್ಚಾಗಿದ್ದರೂ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನದಲ್ಲಿ ಭಾಗವಹಿಸಿದ್ದರು. 92 ವರ್ಷ ವಯಸ್ಸಿನ ವೃದ್ಧರೊಬ್ಬರು ತಮ್ಮ ಮಗನ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಶೇ. 72 ಮತದಾನ
ಮೂಡಿಗೆರೆ: ಪಟ್ಟಣ ಪಂಚಾಯಿತಿಯ 11 ವಾರ್ಡ್‌ಗಳಲ್ಲಿ ಚುನಾವಣೆ ನಡೆದಿದ್ದು ಶೇ 72.53 ಮತದಾನವಾಗಿದೆ. 11 ವಾರ್ಡ್‌ಗಳಲ್ಲಿ 3226 ಗಂಡಸರು, 3219 ಹೆಂಗಸರು ಸೇರಿದಂತೆ ಒಟ್ಟು 6445 ಮತದಾರರಿದ್ದು, 2344 ಗಂಡಸರು, 2331 ಹೆಂಗಸರು ಒಟ್ಟು 4675 ಮತಗಳು ಬಿದ್ದಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತ ಮತದಾನ ನಡೆಯಿತು.
ನಾಳೆ ಸಭೆ
ಚಿಕ್ಕಮಗಳೂರು: ಜಿಲ್ಲಾ ಪದೋನ್ನತ ಪ್ರೌಢಶಾಲಾ ಶಿಕ್ಷಕರ ಸಂಘವನ್ನು ಪುನರ್ ರಚನೆ ಮಾಡುವ ಸಂಬಂಧ ಮಾ. 9 ರಂದು ನಗರದ ಆಜಾದ್ ಪಾರ್ಕ್ ಶಾಲೆಯಲ್ಲಿ ಸಭೆಯನ್ನು ಕರೆಯಲಾಗಿದೆ. ರಾಜ್ಯ ಸಂಘದ ನಿಯಮಾವಳಿಯಂತೆ ಜಿಲ್ಲಾ ಸಮಿತಿಯನ್ನು ಪುನರ್ ರಚನೆ ಮಾಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ. ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.