ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿಧಾನಸಭೆ ಸಭಾಧ್ಯಕ್ಷರಿಗೆ ನೀಲಕಂಠಪ್ಪ ಮನವಿ

Parashurama
Updated On : 8 Mar 2013, 10:28 am

ತರೀಕೆರೆ: ಕರ್ನಾಟಕ ಸರ್ಕಾರದ ವಿಧಾನಸಭಾ ಸಭಾಧ್ಯಕ್ಷರಿಗೆ ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಅವರು ಮನವಿ ಪತ್ರ ನೀಡಿದ್ದು, ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದು ವಿವರ ಈ ರೀತಿ ಇದೆ.ಡಿ.ಎಸ್. ಸುರೇಶ್ ಶಾಸಕರು ತರೀಕೆರೆ ಇವರು ಈಗಾಗಲೇ ಸುಮಾರು 10 ದಿನಗಳ ಹಿಂದೆ ರಾಜಿನಾಮೆಯನ್ನು ಸಲ್ಲಿಸಿದ್ದಾರೆ. ಇದೇ ರೀತಿ ಇನ್ನೂ ಕೆಲವರು ಶಾಸಕರು ರಾಜಿನಾಮೆ ಕೊಟ್ಟಿದ್ದಾರೆ.
ತಾವು ತೆಗೆದುಕೊಂಡ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ತಾವು ತೆಗೆದುಕೊಂಡ ಕಾನೂನನ್ನು ವಿಮರ್ಶೆ ಮಾಡಿ ಮೇಲ್ಮನವಿಗೆ ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಅದಕ್ಕಾಗಿ ತಾವು ತತ್‌ಕ್ಷಣ ತಮ್ಮ ವಿವೇಚನಾನುಸಾರ ನಿರ್ಣಯ ತೆಗೆದುಕೊಳ್ಳಬೇಕಾಗಿ  ಮತ್ತು ತಮ್ಮ ನಿರ್ಣಯದ ನಂತರ ನಾವು ಸಹ ಕಾನೂನು ಹೋರಾಟಕ್ಕಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಾಗುತ್ತದೆ. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಕಾನೂನು ಮತ್ತು ರಾಜ್ಯದ ಹಿತ ರಕ್ಷಿಸಬೇಕಾಗಿ ಮನವಿ ಮಾಡಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಮಾಜ ಸೇವೆಯೇ ರಾಜಕೀಯಕ್ಕೆ ಅನ್ವರ್ಥನಾಮ
ಜೋಗ್‌ಫಾಲ್ಸ್: ಸದೃಢ ಸಮಾಜದ ನಿರ್ಮಾಣಕ್ಕೆ ರಾಜಕೀಯ ಅನಿವಾರ್ಯವಾಗಿದೆ. ರಾಜಕೀಯ ಎಂದರೆ ಸಮಾಜ ಸೇವೆಗೆ ಮತ್ತೊಂದು ಹೆಸರು. ಇಂತಹ ಸಮಾಜ ಸೇವೆಯ ಮೂಲಕ ಜನರ ಋಣ ತೀರಿಸಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ ಕೂಡ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಅವರು ಇಲ್ಲಿನ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಜೋಗ್ ಕಾರ್ಗಲ್ ಕಾಂಗ್ರೆಸ್ ಘಟಕದ  ವತಿಯಿಂದ ಇಲ್ಲಿನ ನಿವಾಸಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ವೀಣಾ ಬೆಳೆಯೂರು, ಕೆ.ಸಿ. ಹರೀಶ್‌ಗೌಡ, ಪಿ. ಮಂಜು, ಟಿ. ಸುರೇಶ್, ವಿ. ಸಂತೋಷ್‌ಕುಮಾರ್‌ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments