ನಿತ್ಯಾನಂದಸ್ವಾಮಿ ವೀರಶೈವ ಎನ್ನುವುದರಲ್ಲಿ ಅರ್ಥವಿಲ್ಲ
ನರಸಿಂಹರಾಜಪುರ: ವಿವಾದಿತ ನಿತ್ಯಾನಂದಸ್ವಾಮಿ ತಾನು ವೀರಶೈವ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯಾ ಭಗವತ್ಪಾದರು ಖಂಡಿಸಿದ್ದಾರೆ.
ಅವರು ಪತ್ರಕರ್ತರೊಂದಿಗೆ ಮಾತನಾಡಿ, ವೀರಶೈವ ಧರ್ಮಕ್ಕೆ ತನ್ನದೇ ಆದ ತತ್ವ, ಸಿದ್ಧಾಂತ,ಪರಂಪರೆಗಳಿವೆ. ವೀರಶೈವೇತರರು ಈ ಧರ್ಮವನ್ನು ಕ್ರಮಬದ್ಧವಾಗಿ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ. ವೀರಶೈವ ಆಚರಣೆ ಮತ್ತು ಪರಿಪಾಲನೆ ಇಲ್ಲದೆ ವೀರಶೈವನಾಗಲು ಬರುವುದಿಲ್ಲ.ವೀರಶೈವ ಪಂಚಪೀಠ ಪರಂಪರೆಯ ಪಟ್ಟಾಧಿಕಾರಿಗಳಿಂದ ಮಾತ್ರ ಶಿವದೀಕ್ಷೆ, ಮಂತ್ರೋಪದೇಶ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ನಿತ್ಯಾನಂದನು ವೀರಶೈವ ಧರ್ಮದ ಆಚರಣೆ ಮಾಡುತ್ತಿಲ್ಲ. ಆತ ವೀರಶೈವ ಎಂದು ಹೇಳಿಕೊಳ್ಳುವದರಲ್ಲಿ ಅರ್ಥವೇ ಇಲ್ಲ. ಇದು ವೀರಶೈವ ಪೀಠಗಳನ್ನು ಕಬಳಿಸುವ ಕೃತ್ಯ ಇರಬಹುದು. ಇಂತಹವರ ವಿರುದ್ಧ ವೀರಶೈವ ಸಮಾಜ ಜಾಗೃತಗೊಳ್ಳಬೇಕಾಗಿದೆ. ನಿತ್ಯಾನಂದನ ಇಂತಹ ವರ್ತನೆಯನ್ನು ಪಂಚಪೀಠದ ಮಠಗಳು ಹಾಗೂ ವೀರಶೈವ ಸಮಾಜವು ಖಂಡಿಸುತ್ತದೆ. ಇಂತಹ ವಿಚಾರಗಳಿಗೆ ಭಕ್ತರು ಆಸ್ಪದ ಕೊಡಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.