ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೌಕರರ ಕೊರತೆ ನಡುವೆಯೂ ಉತ್ತಮ ಸಾಧನೆ

Parashurama
Updated On : 9 Mar 2013, 11:37 am

ಕ.ಪ್ರ.ವಾರ್ತೆ,ಕೊಪ್ಪ, ಮಾ 8
 ಮೆಸ್ಕಾಂನಲ್ಲಿ ನೌಕರರ ಕೊರತೆ ಇದ್ದರೂ ನೌಕರರು ತಮ್ಮ ಕ್ಷಿಪ್ರ ಕಾರ್ಯಕ್ಷಮತೆ ಹಾಗೂ ದಕ್ಷತೆಯಿಂದ ಸಾರ್ವಜನಿಕರಿಗೆ ಸೇವೆ ನಿಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ರಾಜ್ಯದಲ್ಲಿ ಮೆಸ್ಕಾಂ  ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಯಮಿತ ನೌಕರರ ಸಂಘದ ಉಪಾಧ್ಯಕ್ಷ ಶಫಿವುಲ್ಲಾ ತಿಳಿಸಿದರು.
  ಇಲ್ಲಿನ ಒಕ್ಕಲಿಗರ ಭವನದಲ್ಲಿ ಕ.ವಿ.ಪ್ರ.ನಿ.ನೌಕರ ಸಂಘದ ಕೊಪ್ಪ ಪ್ರಾಥಮಿಕ ಸಮಿತಿಯಿಂದ ಸುರಕ್ಷತಾ  ಸಪ್ತಾಹ ಮತ್ತು ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುರಕ್ಷತಾ ಸಾಮಗ್ರಿ: ಈಗಾಗಲೇ ಮೆಸ್ಕಾಂ ವ್ಯಾಪ್ತಿಯಲ್ಲಿ ನೌಕರರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಮೆಸ್ಕಾಂ ವ್ಯಾಪ್ತಿಗೆ ಬರುವ ಎಲ್ಲಾ ವಿಭಾಗ ಕಚೇರಿಗಳಿಗೂ ವಿದ್ಯುತ್ ಸುರಕ್ಷತಾ ವಸ್ತುಗಳನ್ನು ನೀಡಲಾಗಿದ್ದು, ಇವುಗಳನ್ನು  ತಪ್ಪದೇ ವಿದ್ಯುತ್ ರಿಪೇರಿ ಕಾರ್ಯದಲ್ಲಿ  ಬಳಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸಾರಿಸುವ ಮೂಲಕ ಜಾಗೃತರಾಗಬೇಕು ಎಂದರು.
 7ನೇ ತರಗತಿ ವಿದ್ಯಾಭ್ಯಾಸ ಮಾಡಿದವರನ್ನು ಗ್ಯಾಂಗ್ ಮನ್‌ಗಳನ್ನಾಗಿ ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ  ನಡೆಯುತ್ತಿದ್ದು, ಶೀಘ್ರದಲ್ಲಿ ನೇಮಾಕಾತಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಹಲವು ವರ್ಷದಿಂದ ಕಚೇರಿಯಲ್ಲಿ ಸಫಾಯಿ ಮತ್ತು ಇತರೆ ಕೆಲಸ ಮಾಡುತ್ತಿರುವರನ್ನು ಖಾಯಂ ಗೊಳಿಸಬೇಕು ಎಂದು ಕ.ವಿ.ಪ್ರ.ನಿ.ನೌಕರ ಸಂಘದಿಂದ ಒತ್ತಾಯವನ್ನು ಹಾಕಲಾಗಿದೆ ಇದು ಶೀಘ್ರದಲ್ಲಿ ಖಾಯಂ ಮಾಡಿಸುವಲ್ಲಿ ಸಂಘ ಕಾರ್ಯ ಪ್ರವೃತ್ತವಾಗಲಿದೆ ಎಂದರು.
 ಕ.ವಿ.ಪ್ರ.ನಿ.ನೌಕರ ಸಂಘದ ಉಪಾಧ್ಯಕ್ಷ ಶಫಿವುಲ್ಲಾ ಮತ್ತು ಚಿಕ್ಕಮಗಳೂರು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ. ರಾಜೇಗೌಡ ಅವರನ್ನು ಕೊಪ್ಪ ಪ್ರಾಥಮಿಕ ಸಮಿತಿಯಿಂದ ಸನ್ಮಾನಿಸಲಾಯಿತು. ಕ.ವಿ.ಪ್ರ.ನಿ. ನೌಕರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರಪ್ಪ, ಸಾಗರ ಮೆಸ್ಕಾಂ ನೌಕರ ಸಂಘದ ಅಧ್ಯಕ್ಷ  ಶ್ರೀಧರ್, ಜೋಗ ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷ ನಾಗೇಶ್,  ನಂಜೇಗೌಡ, ರಂಗಸ್ವಾಮಿ, ಗೋಪಾಲಕೃಷ್ಣ, ಗುತ್ತಿಗೆದಾರ ಸಂಘದ ಅಧ್ಯಕ್ಷ ಎನ್.ಕೆ. ಸತೀಶ್, ಕೊಪ್ಪ ಪ್ರಾಥಮಿಕ ಸಮಿತಿ ಅಧ್ಯಕ್ಷ ತಿಮ್ಮಯ್ಯ, ಕಾರ್ಯದರ್ಶಿ ಸಿದ್ದಿಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments