ಸಂಗೀತ ಮನಸ್ಸಿಗೆ ದಿವ್ಯೌಷಧ: ಭಗವಾನ್
ಕನ್ನಡಪ್ರಭವಾರ್ತೆ, ತರೀಕೆರೆ, ಮಾ.9
ಸಂಗೀತ ಮಾನಸಿಕ ದಿವ್ಯೌಷಧವಾಗಿದೆ ಎಂದು ಗಾಯಕ, ಕನ್ನಡಶ್ರೀ ಬಿ.ಎಸ್. ಭಗವಾನ್ ತಿಳಿಸಿದ್ದಾರೆ. ಅವರು ಭಾನುವಾರ ಶ್ರೀನಿವಾಸ ಸಂಗೀತ ಪಾಠಶಾಲೆ, ಶ್ರೀನಿವಾಸ ಯುವ ಭಜನಾ ಮಂಡಳಿ, ಶ್ರೀವತ್ಸ ಭಜನಾ ಮಂಡಳಿಯಿಂದ ಮಹಾಮಹಿಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಾಡಾಗಿದ್ದ 8ನೇ ವರ್ಷದ ಸದ್ಗುರು ಶ್ರೀ ತ್ಯಾಗರಾಜರು, ಪುರಂದರದಾಸರ ಹಾಗೂ ದಾಸವರೇಣ್ಯರ ಆರಾಧನಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪ್ರಮುಖ ಸ್ಥಾನ: ಸಂಗೀತ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ರಾಗ ತಾಳ, ಸಾಹಿತ್ಯವನ್ನು ಮತ್ತೆ ಮತ್ತೆ ಸ್ಮರಣೆಗೆ ತರುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿಶ್ವದಲ್ಲೇ ಒಂದು ಪ್ರಮುಖ ಸ್ಥಾನ ಇದೆ. ಹಿರಿಯರು, ಕಿರಿಯರು ಸೇರಿ ನಡೆಸುವಂತಹ ಈ ಕಾರ್ಯಕ್ರಮ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ವೇದಿಕೆ ಅಗತ್ಯ: ಸಂಗೀತ ವಿದುಷಿ ಪುಷ್ಪವಲ್ಲಿ ಮಾತನಾಡಿ, ಗುರುಗಳ ಮಾರ್ಗದರ್ಶನವೇ ಬಹಳ ಮುಖ್ಯವಾದುದು. ಕಲಿಕೆಯಲ್ಲಿ ಶ್ರದ್ಧೆ ಅಗತ್ಯ, ಕಲೆಗೆ ಒಂದು ವೇದಿಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ರಾಘವೇಂದ್ರರಾವ್ ಮಾತನಾಡಿ, ಎಲ್ಲ ಕಾಯಿಲೆಗಳಿಗೆ ಸಂಗೀತ ದಿವ್ಯೌಷಧ. ಸಂಗೀತದಿಂದ ಆರೋಗ್ಯ, ಆನಂದ ಸಿಗುತ್ತದೆ ಎಂದು ತಿಳಿಸಿದರು.
ಶ್ರೀವತ್ಸ ಭಜನಾ ಮಂಡಳಿಯ ಲತಾ ಗೋಪಾಲಕೃಷ್ಣ, ಶ್ರೀನಿವಾಸ ಸಂಗೀತ ಪಾಠಶಾಲೆಯ ವಿಜಯಪ್ರಕಾಶ್ ಅವರು ಸಂಗೀತ ವಿದುಷಿ ಪುಷ್ಪವಲ್ಲಿ ಅವರಿಗೆ ಗುರುವಂದನೆ ಸಲ್ಲಿಸಿದರು. ವಿಂದ್ಯಾ, ವರ್ಷ ಮಾತನಾಡಿದರು.
ಕಲಾವಿದರಾದ ವಿನೋದಾಚಾರ್, ಅನಿರುದ್ದ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.