ಕೊಪ್ಪ ಪಪಂ ಬಿಜೆಪಿ ತೆಕ್ಕೆಗೆ
ಕ.ಪ್ರ.ವಾರ್ತೆ, ಕೊಪ್ಪ ಮಾ11:
ಕೊಪ್ಪ ಪಟ್ಟಣ ಪಂಚಾಯಿತಿ 11ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ 6 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟಬಹುಮತ ಪಡೆದುಕೊಂಡಿದೆ. ಕಾಂಗ್ರೆಸ್ 4 ಸ್ಥಾನ ಹಾಗೂ ಜೆಡಿಎಸ್ 1 ಸ್ಥಾನಗಳಿಸಿದೆ. ಕಳೆದ ಪಪಂ ಚುನಾವಣೆಯಲ್ಲಿ ಖಾತೆ ತೆರೆಯದ ಕಾಂಗ್ರೇಸ್ ಈ ಚುನಾವಣೆಯಲ್ಲಿ 4 ಸ್ಥಾನಗಳಿಸುವ ಮೂಲಕ ಅಲ್ಪಪ್ರಮಾಣದ ಯಶಸ್ಸು ಸಾಧಿಸಿದ್ದು. ಬಿಜೆಪಿ ಕಳೆದ ಚುನಾವಣೆಗಿಂತ ಈ ಬಾರಿ 3 ಸ್ಥಾನಗಳನ್ನು ಕಡಿಮೆ ಪಡೆಯುವ ಮೂಲಕ ಕೊಂಚ ಹಿನ್ನಡೆ ಅನುಭವಿಸಿದೆ. ಜೆಡಿಎಸ್ ಕೂಡ ಎರಡು ಸ್ಥಾನಗಳನ್ನು ಕಡಿಮೆ ಪಡೆಕೊಂಡು ಹಿನ್ನಡೆ ಸಾಧಿಸಿದೆ.
ವಿಜಯಿಗಳಿವರು: 1ನೇ ವಾರ್ಡ್- ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಶೆಟ್ಟಿ. 2ನೇ ವಾರ್ಡ್ಬಿಜೆಪಿಯ ಪ್ರತಿಮಾ ರಾಧಕೃಷ್ಣ, 3ನೇ ವಾರ್ಡ್-ಕಾಂಗ್ರೆಸ್ನ ಎಸ್.ಸುಬ್ರಮಣ್ಯ, ಶೆಟ್ಟಿ, 4ನೇ ವಾರ್ಡ್- ಬಿಜೆಪಿಯ ವಾಣಿಸತೀಶ್, 5ನೇ ವಾರ್ಡ್- ಜೆಡಿಎಸ್ನ ಆಶಾ ಪೆರೀಸ್, 6ನೇ ವಾರ್ಡ್-ಬಿಜೆಪಿಯ ದಿವಾಕರ್, 7ನೇ ವಾರ್ಡ್-ಕಾಂಗ್ರೆಸ್ನ ಕೆ.ಎಸ್.ಹರೀಶ್ ಭಂಡಾರಿ, 8ನೇ ವಾರ್ಡ್- ಬಿಜೆಪಿಯ ಅನಸೂಯ ಕೆ.ಮೂರ್ತಿ, 9ನೇ ವಾರ್ಡ್-ಬಿಜೆಪಿಯ ವಸಂತಿ,10 ನೇ ವಾರ್ಡ್- ಕಾಂಗ್ರೆಸ್ನ ವಿಜಯಕುಮಾರ್, 11ನೇ ವಾರ್ಡ್-ಕಾಂಗ್ರೆಸ್ನ ಮಾಲತಿ ಜಯಗಳಿಸಿದ್ದಾರೆ. ಜಯಗಳಿಸಿದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಸೂಚಿಯಾಗಲಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.