ಪಡಿತರ ಅಕ್ಕಿ ಅಕ್ರಮ ಸಾಗಾಣೆ; ವಶ
ಕೊಪ್ಪ: ಲಾರಿಯೊಂದರಲ್ಲಿ ಪಡಿತರ ಅಕ್ಕಿಯನ್ನು ಮಂಗಳೂರಿಗೆ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕೊಪ್ಪ ಪೊಲೀಸರು ಅಕ್ಕಿ ತುಂಬಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣ ಖಾಸಗಿ ಗೋದಾಮಿನಿಂದ 50 ಕೆ.ಜಿ. ತೂಕದ 129 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಲಾರಿ ಮಾಲೀಕ ಮಂಜುನಾಥ ಮತ್ತು ಚಾಲಕ ಪ್ರಕಾಶ್ ಅವರ ಮೇಲೆ ಅಗತ್ಯ ವಸ್ತುಗಳ ದುರ್ಬಳಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ನ್ಯಾಯಾಂಗ ವಶಕ್ಕೆ ಲಾರಿಯನ್ನು ನೀಡಿದ ನಂತರ ತಹಸೀಲ್ದಾರ್ ಅವರು ಇದು ಪಡಿತರ ಅಕ್ಕಿಯಲ್ಲ. ಖಾಸಗಿ ಮಿಲ್ ಅಕ್ಕಿ ಎಂದು ವರದಿ ನೀಡಿದ್ದು, ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪಿ ಎಸ್‌ಐ ಗವಿರಾಜ್ ತಿಳಿಸಿದ್ದಾರೆ.