ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ
ಕ.ಪ್ರ ವಾರ್ತೆ, ಮೂಡಿಗೆರೆ, ಮಾ.14
ಶ್ರೀಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಮಹಾರಥೋತ್ಸವ ನಡೆಯಿತು. ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ಪಾಲ್ಗೊಂಡು ಬಂದಂತಹ ಭಕ್ತಾಧಿಗಳಿಗೆ ಆಶೀರ್ವಚನ ನೀಡಿ ಪತ್ರಕರ್ತರಿಗೆ ರಥೋತ್ಸವದ ಸಂಪೂರ್ಣ ವಿವರಣೆ ನೀಡಿದರು.
ರಥೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ನಂತರ ಉತ್ಸವಮೂರ್ತಿಯನ್ನು ಭವ್ಯ ಅಲಂಕೃತ ರಥದಲ್ಲಿ ಕೂರಿಸಿ ಮಂಗಳಾರಾತಿ ಮಾಡಿದ ನಂತರ ಭಕ್ತಾಧಿಗಳು ರಥ ಎಳೆದು ಪುನೀತರಾದರು.
ರಥೋತ್ಸವದ ಅಂಗಾಗಿ ಧರ್ಮಕರ್ತೆ ರಾಜಲಕ್ಷ್ಮಿ ಭಿ. ಜೋಷಿ ಮತ್ತು ಕುಟುಂಬದವರು ರಥೋತ್ಸವಕ್ಕೆ ಆಗಮಿಸಿದ ಮಹಿಳೆಯರಿಗೆ ಅರಷಿಣ ಕುಂಕುಮ, ಬಳೆ, ಮಂಗಳದ್ರವ್ಯ ವಿತರಿಸಿದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.