30ರಿಂದ 2ದಿನ ಶೃಂಗೇರಿಯಲ್ಲಿ ಕ್ಷೇತ್ರ ವಿಪ್ರ ಸಮ್ಮೇಳನ
ಶೃಂಗೇರಿ: ತಾಲೂಕು ಬ್ರಾಹ್ಮಣ ಮಹಾ ಸಭಾ ಆಶ್ರಯದಲ್ಲಿ ಪಟ್ಟಣದ ವಿದ್ಯಾಭಾರತೀ ಸಭಾಭವನದಲ್ಲಿ 30 ಹಾಗೂ 31 ರಂದು ಶೃಂಗೇರಿ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನ ನಡೆಯಲಿದೆ.
30 ರ ಬೆಳಿಗ್ಗೆ 9.30ಕ್ಕೆ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಮಣ್ಯಂ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ, ಚಿತ್ರ ಪ್ರದರ್ಶನ ಉದ್ಘಾಟನೆ ನೆರವೇರಲಿದೆ. ನಂತರ ಮಲೆನಾಡಿನ ಬ್ರಾಹ್ಮಣ ಸಮುದಾಯದ ಬದುಕು ಬವಣೆ ಕುರಿತ ವಿಚಾರ ಗೋಷ್ಠಿ, ಕಙೃಷಿ ಸಮಸ್ಯೆ ಕುರಿತ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ಬ್ರಾಹ್ಮಣ ಸಮುದಾಯದ ಸಮಸ್ಯೆ ಮತ್ತು ಪರಿಹಾರೋಪಾಯಗಳು ಕುರಿತು ಕುಂದಾಪುರದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಎಚ್.ವಿ. ನರಸಿಂಹ ಮೂರ್ತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2ರಿಂದ ಮಹಿಳಾ ಗೋಷ್ಠಿ ನಡೆಯಲಿದ್ದು, ಬ್ರಾಹ್ಮಣ್ಯವನ್ನು ಉಳಿಸುವಲ್ಲಿ ಉದ್ಯೋಗಸ್ಥ ಮಹಿಳೆಯರ ಪಾತ್ರ ವಿಷಯದ ಕುರಿತು ಮೈಸೂರಿನ ವೈದ್ಯೆ ಡಾ. ಲಲಿತಾ ಬಾಸ್ಕರ್, ಬ್ರಾಹ್ಮಣ್ಯವನ್ನು ಉಳಿಸುವಲ್ಲಿ ಗೃಹಿಣಿಯರ ಪಾತ್ರ ಕುರಿತು ಬೆಂಗಳೂರಿನ ಪದ್ಮಾ ಶೇಷಾದ್ರಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರಕಲಾ ವಿರಚಿತ ಚಿರಂತನ ಕೃತಿ ಬಿಡುಗಡೆ ನಡೆಯಲಿದೆ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿ ನಡೆಯಲಿದೆ.