ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಖರೀದಿ ವಸ್ತುಗಳ ಬಗ್ಗೆ ಜಾಗೃತರಾಗಿ

Lingaraj Badiger
Updated On : 16 Mar 2013, 10:43 am

ಕ.ಪ್ರ ವಾರ್ತೆ, ಚಿಕ್ಕಮಗಳೂರು. ಮಾ. 15
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಗ್ರಾಹಕನಾಗಿದ್ದು ತಾವು ಖರೀದಿಸುವ ವಸ್ತು ಅಥವಾ ಪಡೆಯುವ ಸೇವೆಯಲ್ಲಿ ಜಾಗೃತರಾಗಿರಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ಹೆಚ್.ಎಸ್. ರುದ್ರಪ್ಪ ಅವರು ಕರೆ ನೀಡಿದ್ದಾರೆ.
ನಗರದ ವಾರ್ತಾ ಭವನದಲ್ಲಿ ಜಿಲ್ಲಾ ಆಡಳಿತ, ಆಹಾರ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಗ್ರಾಹಕನು ಮಾರಾಟದಲ್ಲಿ ಪಡೆಯುವ ವಸ್ತು ಅಥವಾ ಪಡೆಯುವ ಸೇವೆಯಲ್ಲಿ ನ್ಯೂನ್ಯತೆ, ವಂಚನೆ, ದರದ ವ್ಯತ್ಯಾಸ, ಗುಣಮಟ್ಟದಲ್ಲಿ ಲೋಪದೋಷಗಳಿದ್ದು, ಇವುಗಳ ಅರಿವಿಲ್ಲದೆ ವಂಚನೆಗೊಳಗಾಗುತ್ತಿದ್ದಾನೆ. ಇದರ ಬಗ್ಗೆ ಜಾಗೃತರಾಗಿರಬೇಕೆಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ರತ್ನಾಕರ್ ನಾಯ್ಕ ಮಾತನಾಡಿ, ಗ್ರಾಹಕರಿಗಾಗುವ ತೊಂದರೆಯನ್ನು ಸರಿಪಡಿಸುವ ಉದ್ದೇಶದಿಂದ ಗ್ರಾಹಕರ ಹಿತರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದಿದೆ. ಗ್ರಾಹಕರು ತಮ್ಮ ಹಿತರಕ್ಷಣೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವುದರ ಮೂಲಕ ಜಾಗೃತರಾಗಿ ಮಾರುಕಟ್ಟೆಯಲ್ಲಿ ನಡೆಯುವ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದೆಂದರು. ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ದ್ಯಾಮಣ್ಣಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement