ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೋಣಿಗುಂಡಿಯಲ್ಲಿ ತೂಗು ಸೇತುವೆ

Lingaraj Badiger
Updated On : 16 Mar 2013, 10:49 am

ಕ.ಪ್ರ.ವಾರ್ತೆ, ಕೊಪ್ಪ, ಮಾ.15 ತಾಲೂಕಿನ ನರಸೀಪುರ ಮತ್ತು ಅಸಗೋಡು ಗ್ರಾಪಂ ವ್ಯಾಪ್ತಿಯ ಹತ್ತಾರು ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುವ 297 ಅಡಿ ಉದ್ದ ತೂಗು ಸೇತುವೆಯನ್ನು ನಾರ್ವೆಯ ದೋಣಿ ಗುಂಡಿಯಲ್ಲಿ  ನಿರ್ಮಾಣಮಾಡಲಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದೆ.
 ಮಳೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ದೋಣಿಗಂಡಿ ಬಳಿಯಲ್ಲಿ ತುಂಗಾ ನದಿಗೆ ಅಡ್ಡಲಾಗಿ 297 ಅಡಿ ಉದ್ದದ ತೂಗು ಸೇತುವೆಯನ್ನು ಸಮಾರು ರು. 80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ನಿಲನಕ್ಷೆಯನ್ನು ಸುಳ್ಯದ ಗಿರೀಶ್ ಭಾರಧ್ವಾಜ್ ಮಾಡಿಕೊಟ್ಟಿದ್ದಾರೆ.
ರಾ.ಹೆ.13ಕ್ಕೆ ಸಂಪರ್ಕ: ಈ ತೂಗು ಸೇತುವೆ ನಿರ್ಮಾಣದಿಂದ ಮುಡುಮುಡಿ ಮೂಲಕ ಎನ್.ಎಚ್.ಪಿ ಗ್ರಾಮಕ್ಕೆ ಸಾಗಿದರೆ ರಾ.ಹೆ. 13ಕ್ಕೆ ಸಂಪರ್ಕ ಕಲ್ಪಿಸುತ್ತದೆ. ನಾರ್ವೆಯಿಂದ ನಾಗಲಾಪುದ ಮೂಲಕ ಸುತ್ತು ದಾರಿ ಬಳಸಿ ಸಾಗುತ್ತಿದ್ದವರು ತೂಗು ಸೇತುವೆ ಮೂಲಕ ಸಾಗಿದರೆ ಸಮಾರು 12 ಕಿ.ಮೀ ಪ್ರಯಾಣ ಕಡಿಮೆಯಾಗುತ್ತದೆ.          
 ದ್ವಿಚಕ್ರ ವಾಹನಗಳು ಓಡಾಡಲು ಅವಕಾಶವಿರುವ ಈ ಸೇತುವೆ ನಿರ್ಮಾಣದಿಂದ ನರಸೀಪುರ ಮತ್ತು ಅಸಗೋಡು ಪಂಚಾಯತ್ ವ್ಯಾಪ್ತಿಯ ನಾರ್ವೆ, ಕುಂಚೂರು, ನಾಗಲಾಪುರ, ಬೆಳಗದ್ದೆ, ತಮ್ಮಡವಳ್ಳಿ, ವಗಳೆ,ಅರ್ಡಿಕೊಪ್ಪ, ಆಡುವಳ್ಳಿ, ಉಂಟುವಳ್ಳಿ, ಮುಡುಮುಡಿ ಮೊದಲಾದ ಗ್ರಾಮದ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗುವುದರಿಂದ ಈ ತೂಗು ಸೇತುವೆ ಹಲವು ಗ್ರಾಮಗಳ ಸಂಪರ್ಕದ ಕೊಂಡಿಯಾದಂತಾಗಿದೆ.
ದಶಕದ ಬೇಡಿಕೆ: ಹತ್ತಾರು ಹಳ್ಳಿಗಳ ಹಲವು ದಶಕಗಳ ಬೇಡಿಕೆಯಾದ ದೋಣಿಗಂಡಿ ತೂಗು ಸೇತುವೆಗೆ ಸಂಪರ್ಕಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಡಾ. ಪದ್ಮನಾಭ ಭಟ್ ತಮ್ಮ ಅಡಿಕೆ ತೋಟದ ಜಮೀನಿನ ಸ್ವಲ್ಪ ಭಾಗವನ್ನು ಬಿಟ್ಟುಕೊಟ್ಟಿದ್ದು, ಅವರನ್ನು  ಹಾಗೂ ಸೇತುವೆ ನಿರ್ಮಾಣಕ್ಕೆ ಅನುದಾನ ಕೊಡಿಸುವಲ್ಲಿ ವಿಶೇಷ ಶ್ರಮ ವಹಿಸಿದ್ದ  ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರನ್ನು ಗ್ರಾಮಸ್ಥರು  ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement