ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಲಿತ ಶಾಲೆ, ಶಿಕ್ಷರನ್ನು ಮರೆಯಬೇಡಿ: ಶಾಸಕ

Parashurama
Updated On : 17 Mar 2013, 10:42 am

ತರೀಕೆರೆ: ಭವಿಷ್ಯ ರೂಪಿಸುವ ತಂದೆ ತಾಯಿಗಳನ್ನು ಶಿಕ್ಷಕರನ್ನು ಮತ್ತು ಶಾಲೆಯನ್ನು ಮಕ್ಕಳು ಯಾವಾಗಲು ನೆನಪಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದ್ದಾರೆ.
ಅವರು, ಶನಿವಾರ ಪಟ್ಟಣದ ತುದೀಪೇಟೆ ಸರ್ಕಾರಿ ಮಾದರಿ ಹಿ ಪ್ರಾ.ಶಾಲೆಯಲ್ಲಿ ನಿರ್ಮಾಣವಾದ ಹೆಚ್ಚುವರಿ ಶಾಲಾ ಕೊಠಡಿ, ದಾಸ್ತಾನು ಕೊಠಡಿ ಮತ್ತು ಶಾಲೆಯ ನಿವೃತ್ತ ಸಂಗೀತ ಶಿಕ್ಷಕಿ  
ನಂಜಮ್ಮ ಅವರು ನಿರ್ಮಿಸಿಕೊಟ್ಟ ರಂಗಮಂದಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಂಗಮಂದಿರ ಕೊಡುಗೆ: ಸರ್ಕಾರ ಶಿಕ್ಷಣಕ್ಕಾಗಿ ಅನೇಕ ರೀತಿಯ ಸವಲತ್ತುಗಳನ್ನು ನೀಡಿದೆ. ತಾಲೂಕಿನಲ್ಲಿ ಐದು ವರ್ಷಗಳಲ್ಲಿ ಅನೇಕ ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸಂಗೀತ ಶಿಕ್ಷಕಿ ನಂಜಮ್ಮ ಅವರು ಶಾಲೆಗೆ ರಂಗಮಂದಿರವನ್ನು ನಿರ್ಮಿಸಿಕೊಟ್ಟಿರುವುದು ತುಂಬಾ ಸಂತೋಷವಾಗಿದೆ, ದಾನಧರ್ಮ ಮಾಡುವುದು ಬಹಳ ದೊಡ್ಡಗುಣ  ಎಂದರು.
 ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಬಿಸಿಯೂಟ, ಸೈಕಲ್, ಸಮವಸ್ತ್ರ, ಪಠ್ಯಪುಸ್ತಕ ಇತ್ಯಾದಿ ಅನೇಕ ರೀತಿಯ ಭೌತಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ತಾಲೂಕಿನಲ್ಲಿ ಈವರೆವಿಗೆ 250 ಶಾಲಾ ಕೊಠಡಿಗಳನ್ನು, ಶಾಲೆ ಸುತ್ತ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದರು.
ಶಾಲೆಗೆ ಸೌಲಭ್ಯ: ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಕೆ.ನಾಗರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಗಾಗಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಎಲ್ಲ ರೀತಿಯ ಮೂಲಬೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ತಾ.ಪಂ.ಅಧ್ಯಕ್ಷೆ ದೀಪಾ ಉಮೇಶ್,  ಶಾಲೆ ಎಸ್.ಡಿ.ಎಂ.ಸಿ ಸದಸ್ಯರು, ನಂಜಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments