ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜ್ಞಾನಾರ್ಜನೆಗೆ ಸಂವಾದಗಳು ಸಹಕಾರಿ

Lingaraj Badiger
Updated On : 18 Mar 2013, 10:35 am

ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 17
ನಲಿ- ಕಲಿ ಸಂವಾದ ಕಾರ್ಯಕ್ರಮ ಬೊಧನೆಗೆ ಅತ್ಯುತ್ತಮ ವಿಧಾನ. ಮಕ್ಕಳ ಜ್ಞಾನಾರ್ಜನೆಗೆ ಇಂತಹ ಸಂವಾದಗಳು ಸಹಕಾರಿ ಎಂದು ಶಿಕ್ಷಣ ಸಮನ್ವಯಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ನಗರದ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶನಿವಾರ ನಡೆದ ನಲಿ- ಕಲಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಕರು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿ ಭೋಧನೆಯತ್ತ ಗಮನ ಹರಿಸಬೇಕು. ಕರ್ತವ್ಯದಲ್ಲಿ ಶಿಸ್ತು ಸಮಯ ಪಾಲನೆ ಮಾಡಬೇಕು. ಶಾಲಾ ಅವಧಿಯಲ್ಲಿ ಮೊಬೈಲ್ ಬಳಸಬಾರದು, ಆಗ ಜನರು ಸರ್ಕಾರಿ ಶಾಲೆಗಳ ಬಗ್ಗೆ ಗೌರವ ಬೆಳೆಸಿಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಬಸವೇಗೌಡ, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಹೋಲಿಸಿಕೊಂಡು ಕೀಳರಿಮೆ ಹೊಂದುವುದು ಬೇಡ. ಸಮಾಜದ ಕಟ್ಟಕಡೆಯ ವರ್ಗದವರಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಂದರೇಶ್ ಮಾತನಾಡಿ, ನಲಿ- ಕಲಿ ಕೊಠಡಿಗಳನ್ನು ವಿಭಾಗಿಸಬೇಕು. ಇದರಿಂದ ಶಿಕ್ಷಕರ ಮೇಲೆ ಬೀಳುತ್ತಿರುವ ಒತ್ತಡಕಡಿಮೆ ಮಾಡಬಹುದು ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರ, ವೀರಣ್ಣಗೌಡ. ಲಿಲ್ಲಿ ಜೋಸೆಫ್ ಮತ್ತು ಸುಶೀಲ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಲಿ- ಕಲಿ ಬೋಧನೆ ಮಾಡುವ ತಾಲೂಕಿನ 300 ಶಾಲೆಗಳ 600 ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement